ನಂಜನಗೂಡು: ಲಂಚ ಸ್ವೀಕರಿಸುವಾಗಲೇ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಕಾವೇರಿ ರಂಗನಾಥನ್ ಹಾಗೂ ಅಕೌಂಟ್ ಸೂಪರಿಡೆಂಟ್ ಉಮಾ ಮಹೇಶ್ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಟೆಂಡರ್ ಹಣ ಬಿಡುಗಡೆಗೆ ಚಾಮರಾಜನಗರದ ನಿವಾಸಿ ಅಬ್ದುಲ್ ಅಜೀಜ್ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಕಳೆದ 2022ರಲ್ಲಿ ನಾಲೆ ರಿಪೇರಿಗೆ ಟೆಂಡರ್ ಕರೆಯಲಾಗಿತ್ತು. 23.10 ಲಕ್ಷ ರೂಗೆ ಕಾಮಗಾರಿ ಹಣ ಬಿಡುಗಡೆ ಮಾಡುವ ಮೊದಲು 6% ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಇದಾದ ಸ್ವಲ್ಪ ದಿನಗಳ ಬಳಿಕ 1 ಲಕ್ಷದ 45 ಸಾವಿರ ರೂಗೆ ಡಿಮ್ಯಾಂಡ್ ಮಾಡಲಾಗಿತ್ತು. ಇಂದು ಇಬ್ಬರೂ ಅಧಿಕಾರಿಗಳು ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಈ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಬಿಗ್ ಶಾಕ್ ನೀಡಿದ್ದು, ಇಬ್ಬರನ್ನು ಬಂಧಿಸಿ ಠಾಣೆಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.





