Mysore
14
overcast clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಶ್ರಧ್ದಾ ಭಕ್ತಿಯಿಂದ ಗಣರಾಜ್ಯೋತ್ಸವವನ್ನು ಆಚರಿಸೋಣ : ಜಿಲ್ಲಾಧಿಕಾರಿ ರಾಜೇಂದ್ರ

ಮೈಸೂರು : ದೇಶದ ಬಗೆಗೆ ಅಭಿಮಾನ ಹೆಚ್ಚಿಸುವ ರಾಷ್ಟ್ರೀಯ ಹಬ್ಬಗಳ ಘನತೆ ಹೆಚ್ಚಾಗುವಂತೆ ಶ್ರಧ್ದಾ ಭಕ್ತಿಯಿಂದ ಗಣರಾಜ್ಯೋತ್ಸವ ವನ್ನು ಆಚರಿಸೋಣ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದರು

ಜಿಲ್ಲಾಡಳಿತ ಭವನದಲ್ಲಿ ಇಂದು ನಡೆದ ಗಣರಾಜ್ಯೋತ್ಸವ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜನವರಿ 26 ರಂದು ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿಸಲು ಸಂವಿಧಾನದ ಬಗೆಗೆ, ಸಂವಿಧಾನ ಪೀಠಿಕೆ ಬಗೆಗೆ ವಿದ್ಯಾರ್ಥಿ, ಯುವಜನರು ಹಾಗೂ ಸಾರ್ವಜನಿಕರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವ ಮತ್ತು ರಾಷ್ಟ್ರ ಕಟ್ಟುವ ಸಂಕಲ್ಪ ಎಲ್ಲರಲ್ಲೂ ಬೆಳೆಯುವಂತೆ ಗಣರಾಜ್ಯೋತ್ಸವ ಆಚರಣೆಯಾಗಲಿ ಎಂದರು.

ಅಂದು ಬೆಳಿಗ್ಗೆ 9 ಗಂಟೆಗೆ ಸನ್ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಬನ್ನಿಮಂಟಪ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದು ಮಹಾನಗರ ಪಾಲಿಕೆಯವರು ವೇದಿಕೆ,ಸ್ವಚ್ಚತೆ ,ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ನೋಡಿಕೊಳ್ಳಬೇಕು.

ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿದ್ದು,ಈ ಬಾರಿ ಅಂಧ ಶಾಲಾ ಮಕ್ಕಳಿಂದ ಪೆರೇಡ್ ಮಾಡಿಸಿ ಎಂದರು.

ಸಂಜೆಯ ಕಾರ್ಯಗಳು ಕಲಾಮಂದಿರದಲ್ಲಿ ನಡೆಯಲಿದ್ದು ಈ ಬಾರಿ ಸಾಂಸ್ಕ್ೃತಿಕ ಸೌರಭ ಕಾರ್ಯಕ್ರಮ ಹಾಗೂ ಸರ್ಕಾರಿ ನೌಕರರ ಸಂಘದಿಂದ ಕಾರ್ಯಕ್ರಮ ಇರಲಿವೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್ ಹೇಳಿದರು

ಪ್ಲಾಸ್ಟಿಕ್ ಧ್ವಜ ಕಡ್ಡಾಯ ನಿಷೇಧ : ಪ್ಲಾಸ್ಟಿಕ್ ಧ್ವಜಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಶಾಲಾ ಕಾಲೇಜು,ವಿಶ್ವವಿದ್ಯಾಲಯಗಳ ಮುಖ್ಯಸ್ಥರು ಈ ಕುರಿತು ಆದೇಶ ಮತ್ತು ಸೂಚನೆಗಳನ್ನು ನೀಡಬೇಕು ಹಾಗೂ ಮಹಾನಗರ ಪಾಲಿಕೆಯವರು ಯಾವುದೇ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಧ್ವಜ ಮಾರಾಟವಾಗದಂತೆ ಖಚಿತಪಡಿಸಿಕೊಳ್ಳಬೇಕು ಮತ್ತು ವಾರ್ತಾ ಇಲಾಖೆಯಿಂದ ವ್ಯಾಪಕ ಪ್ರಚಾರ ನೀಡಬೇಕು – ಡಿ.ಸಿ.

ಸಭೆಯಲ್ಲಿ ಎಡಿಸಿ ಲೋಕನಾಥ್, ಅಡಿಷನಲ್ ಎಸ್ಪಿ ನಂದಿನಿ,ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಗೋವಿಂದರಾಜು, ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!