ಮೈಸೂರು: ಸ್ತ್ರೀ ಕುಟುಂಬದ ಆಧಾರಸ್ಥಂಭವಾಗಿದ್ದು, ಆಕೆ ಬೇರೆಯವರ ಜವಾಬ್ದಾರಿ ಜೊತೆಗೆ ತನ್ನ ಸ್ವಂತ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಮರ್ಪಣ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸುಧಾ ಫಣೀಶ್ ಹೇಳಿದರು.
ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆಯಲ್ಲಿ ಮಂಗಳವಾರ ಸ್ಟ್ರಾಂಗ್ ವುಮೆನ್ಸ್ ಹೆಲ್ತ್‌ಕ್ಲಬ್ ವತಿಯಿಂದ ಏರ್ಪಡಿಸಲಾಗಿದ್ದ ಮಹಿಳೆಯರಿಗೆ ಮಾಹಿತಿ ಮತ್ತು ಮನರಂಜನಾ ಕಾರ್ದಯಕ್ರಮದ ಉದ್ಘಾಟನೆ ನೆರವೇರಿಸಿ ಮಾನಾಡಿದರು.
ಗೃಹಕೃತ್ಯ, ಪತಿ, ಮಕ್ಕಳ ಆರೈಕೆಯ ಭರದಲ್ಲಿ ಮಹಿಳೆ ಸ್ವತಃ ತನ್ನ ಆರೋಗ್ಯದ ಬಗ್ಗೆಯೇ ನಿರ್ಲಕ್ಷ ವಹಿಸುತ್ತಿದ್ದು, ಇದು ಆತಂಕಕಾರಿ ಎಂದ ಅವರು, ಮಹಿಳೆೊಂಬ್ಬಳ ಆರೋಗ್ಯ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುವುದರಿಂದ ಆರೋಗ್ಯದ ವಿಚಾರದಲ್ಲಿ ಆಕೆಗೆ ಆತ್ಮ ವಿಸ್ಮತಿ ಸಲ್ಲದು ಎಂದರು.
ಬೇಸಿಗೆಯ ಬವಣೆಗಳು ಮತ್ತು ಪರಿಹಾರೋಪಾಯಗಳ ಕುರಿತು ಉಪನ್ಯಾಸ ನೀಡಿದ ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ಭೂಮಿ ಸೂರ್ಯನ ಸುತ್ತ ಸುತ್ತುವ ಸಂದರ್ಭದಲ್ಲುಂಟಾಗುವ ವಿಸ್ಮಯಕಾರಿ ಕ್ರಿಯೆಗಳೇ ಬೇಸಿಗೆ, ಚಳಿಗಾಲಗಳಾಗಿದೆ ಎಂದರು.
ಸೂರ್ಯನ ಶಾಖ ಭೂಮಿ ತಲುಪಿ ಅದು ವಾಪಸ್ ಹೋಗದಂತೆ ವಾಯು ಮಂಡಲದಲ್ಲಿರುವ ಇಂಗಾಲದ ಡೈ ಆಕ್ಸೈಡ್, ನೈಟ್ರಸ್ ಆಕ್ಸೈಡ್ ಇತ್ಯಾದಿ ಹಸಿರುಮನೆ ಅನಿಲಗಳು ಶಾಖವನ್ನು ಹಿಡಿದಿಟ್ಟುಕೊಂಡು ವಾಯುಮಂಡಲದ ತಾಪವಾನವನ್ನು ನಿಯಂತ್ರಿಸುತ್ತಿದ್ದು, ಈ ಅನಿಲಗಳ ಪ್ರವಾಣ ಹೆಚ್ಚಾದರೆ ಹಾನಿಕಾರಕವೆಂದರು.
ಮಾನವನ ಸ್ವಯಂ ಕೃತ್ಯಗಳಾದ ಅತಿಯಾದ ಪೆಟ್ರೋಲಿಯಂ ಸುಡುವಿಕೆ, ಕಾಡು ನಾಶ, ಕೈಗಾರಿಕೆಗಳ ಹೆಚ್ಚಳ, ಜನಸಂಖ್ಯಾ ಸ್ಪೋಟ, ವಾಯುಮಂಡಲದಲ್ಲಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗಿ ಭೂಮಂಡಲದ ತಾಪಮಾನ ಏರಿಕೆಯಾಗುತ್ತಿದ್ದು, ಹೀಗೇ ಮುಂದುವರಿದರೆ ಹಿಮಾಲಯದಲ್ಲಿ ಮಂಜುಗೆಡ್ಡೆ ಆವಿಯಾಗಿ ಕರಗಿ ಪಟ್ಟಣಗಳೇ ನೀರಿನಿಂದ ಮುಳುಗಿ ಹೋಗುವ ಸಂಭವವಿದೆ ಎಂದು ಎಚ್ಚರಿಕೆ ನೀಡಿದರು.
ಅತಿಯಾದ ಬೇಸಿಗೆ ತಾಪವಾನದಿಂದ ದೈಹಿಕವಾಗಿ ನಿಶ್ಯಕ್ತಿ, ಸುಸ್ತು ಸಂಕಟ, ಮೂರ್ಛೆ ತಪ್ಪುವ ಸೂರ್ಯಾಘಾತ, ಕಾಲರಾ, ಟೈಫಾಯಡ್, ಚರ್ಮ ಕ್ಯಾನ್ಸರ್ ಮುಂತಾದವು ತಲೆದೋರುವ ಸಂಭವವಿದ್ದು, ಅಧಿಕ ನೀರು ಸೇವನೆ, ತೆಳು ಉಡುಪು ಧಾರಣೆ, ದಿನಕ್ಕೆ ೨ಬಾರಿ ತಣ್ಣೀರ ಸ್ನಾನ, ಶುಚಿತ್ವದ ಆಹಾರ ಸೇವನೆ, ಹಣ್ಣು ಹಂಪಲುಗಳ ಸೇವನೆ ಮುಂತಾದುವುಗಳಿಂದ ಬಿಸಿಲಿನ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು ಎಂದರು.
ಸುಯೋಗ್ ವುಮೆನ್ಸ್ ಹೆಲ್ತ್‌ಕ್ಲಬ್ ಅಧ್ಯಕ್ಷೆ ಪನ್ನಗ ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್‌ನ ಗೌರವಾಧ್ಯಕ್ಷೆ ಡಾ.ಜಯಲಕ್ಷಿ ಸೀತಾಪುರ ಉಪಸ್ಥಿತರಿದ್ದರು. ಮಹಿಳೆಯರಿಗಾಗಿ ನಡೆದ ಮನರಂಜನಾ ಚಟುವಟಿಕೆಗಳನ್ನು ಕ್ಲಬ್‌ನ ಕಾರ್ಯದರ್ಶಿ ಗಾಯತ್ರಿ ಸುಂದರೇಶ್ ಹಾಗೂ ಶ್ರೀಮತಿ ಪದ್ಮ ಮಹದೇವ್ ನಡೆಸಿಕೊಟ್ಟರು.