Mysore
19
overcast clouds
Light
Dark

ಸೆರೆಯಾದ ಚಿರತೆ ಜೊತೆ ಸೆಲ್ಫಿಗೆ ಮುಗಿಬಿದ್ದ ಯುವಕ ಆಸ್ಪತ್ರೆ ಪಾಲು

ಮೈಸೂರು: ಸೆರೆಯಾದ ಚಿರತೆಯೊಂದಿಗೆ ಸೆಲ್ಫಿ ತೆಗೆಯಲು ಹೋಗಿ ಯುವಕನೋರ್ವ ಆಸ್ಪತ್ರೆ ಸೇರಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಯಾಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿರತೆಯಿಂದ ದಾಳಿಗೊಳಗಾದ ಯುವಕನನ್ನು ಮೈಸೂರಿನ ಕೆಆರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯಾಲಹಳ್ಳಿ ಗ್ರಾಮದಲ್ಲಿ ಸಾಕು ಜಾನುವಾರುಗಳನ್ನು ಬಲಿ ಪಡೆಯುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅದೇ ಗ್ರಾಮದ ಮಹದೇವಪ್ಪ ಎಂಬುವವರಿಗೆ ಸೇರಿದ ಪಾಳು ಮನೆಯಲ್ಲಿ ಅರಣ್ಯ ಇಲಾಖೆ ಕಾರ್ಯಚರಣೆ ನಡೆಸಿ ಅರವಳಿಕೆ ಮದ್ದು ನೀಡಿ ಚಿರತೆಯನ್ನು ಬಂಧಿಸಿದ್ದರು. ಈ ವೇಳೆ ಬಂಧನವಾಗಿರುವ ಚಿರತೆಯನ್ನು ನೋಡಲು ಗ್ರಾಮಸ್ಥರು ಉತ್ಸುಹಕತೆಯಿಂದ ಬಂದರೇ ಯಾಲಹಳ್ಳಿಯ ಜಯಶಂಕರ್‌ ಚಿರತೆಯೊಂದಿಗೆ ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ.

ಈ ವೇಳೆ ಯುವಕನ ಮೇಲೆ ಚಿರತೆ ಏಕಾಏಕಿ ದಾಳಿ ಮಾಡಿದ್ದು, ಯುವಕನ ಬೆನ್ನಿನ ಮೇಲೆಲ್ಲಾ ಗಾಯಗಳಾಗಿವೆ. ಜಯಶಂಕರ್‌ಗೆ ಚಿಕಿತ್ಸೆಗಾಗಿ ಕೆಆರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಕಾರ್ಯಚರಣೆಯಲ್ಲಿ ಸೆರೆಯಾಗಿರುವುದು ಗಂಡು ಚಿರತೆಯಾಗಿದ್ದು, ನಂಜನಗೂಡಿನ ನರ್ಸರಿಯಲ್ಲಿ ಪ್ರಾಥಾಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಚಿರತೆ ಚೇತರಿಸಿಕೊಂಡ ಬಳಿಕ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.

ಆರ್‌ಎಫ್‌ಓ ನತೀನ್‌ ಕುಮಾರ್‌, ಜನಾರ್ಧನ್‌, ಚೇತನ್‌ ಕುಮಾರ್‌ ಒಳಗೊಂಡ ತಂಡ ಚಿರತೆ ಸೆರೆ ಕಾರ್ಯಾಚರಣೆ ನಡೆಸಿತ್ತು.