Mysore
18
broken clouds

Social Media

ಬುಧವಾರ, 14 ಜನವರಿ 2026
Light
Dark

ಪತ್ರದ ಮೂಲಕ ನಂಜುಂಡೇಶ್ವರನ ಬಳಿ ಅಳಲು ತೋಡಿಕೊಂಡ ಭಕ್ತರು

ನಂಜನಗೂಡು : ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಹುಂಡಿ ಏಣಿಕೆ ವೇಳೆ ಭಕ್ತರು ದೇವರಿಗೆ ಬರೆದ ಪತ್ರಗಳು ಸಿಕ್ಕಿವೆ.

ಸಾಮಾನ್ಯವಾಗಿ ದೇವಾಲಯದ ಹುಂಡಿಗೆ ಹಣ, ಚಿನ್ನ, ಬೆಳ್ಳಿ ಸೇರಿದಂತೆ ಇನ್ನಿತರೆ ಹರಕೆ ವಸ್ತುಗಳನ್ನು ಭಕ್ತರು ಹಾಕುತ್ತಾರೆ. ಆದರೆ ನಂಜುಂಡೇಶ್ವರ ದೇವಾಲಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.

ದೇವಾಲಯಕ್ಕೆ ಭೇಟಿ ನೀಡಿದ ಕೆಲವು ಭಕ್ತರು ತಮಗಾದ ಅನುಭವ ಮತ್ತು ಸಮಸ್ಯೆಗಳನ್ನು ದೇವರ ಹೆಸರಿಗೆ ಪತ್ರ ಬರೆಯುವ ಮೂಲಕ ಅಳಲು ವ್ಯಕ್ತ ಪಡಿಸಿದ್ದಾರೆ.

ನಂಜುಂಡೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಸರಿಯಾದ ಮೂಲಭೂತ ಸೌಕರ್ಯ ಇಲ್ಲ. ನಿನ್ನ ದರ್ಶನಕ್ಕೆ ಭೇಟಿ ನೀಡುವ ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸು ಎಂದ ಪತ್ರದ ಮೂಲಕ ಮನವಿ ಇಟ್ಟಿರುವ ಘಟನೆ ನಡೆದಿದೆ.

Tags:
error: Content is protected !!