Mysore
27
scattered clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ವಿಶ್ವಭಾಷೆ ಸಂಗೀತ ಕಲಿತು ಆನಂದದಿಂದಿರಿ : ಟಿ ಎಸ್ ಶ್ರೀವತ್ಸ

ಮೈಸೂರು: ನೋವನ್ನು ಮರೆಸುವ ಶಕ್ತಿ ಸಂಗೀತಕ್ಕಿದೆ. ವಿಶ್ವಭಾಷೆ ಸಂಗೀತವನ್ನರಿತವರು ಆನಂದದಿಂದ ಇರುವರು. ಎಲ್ಲರೂ ಸಂಗೀತ ಕಲಿತು ಆಸ್ವಾದಿಸಬೇಕು ಎಂದು ಶಾಸಕ ಟಿ ಎಸ್ ಶ್ರೀವತ್ಸ ಹೇಳಿದರು.

ನಗರದ ಹೂಟಗಳ್ಳಿ ಬಿ ಎನ್ ರಾವ್ ಸಭಾಂಗಣದಲ್ಲಿ ಕಲಾಭೂಮಿ ವತಿಯಿಂದ ಸ್ವರ ಸಂಭ್ರಮ ರಾಜ್ಯಮಟ್ಟದ ಕರೋಕೆ ಗಾಯನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಸಾಂಸ್ಕೃತಿಕ ರಾಜಧಾನಿ ಮೈಸೂರು ಕಲಾವಿದರ ತವರೂರು. ಇದಕ್ಕೆ ಸಂಗೀತದ ಶಕ್ತಿಯೇ ಕಾರಣ, ಸಂಗೀತ ಅಭ್ಯಾಸದಿಂದ ಆರೋಗ್ಯ ವೃದ್ಧಿಸುತ್ತದೆ .ಶಂಖನಾದ ಶಾಸ್ವಕೋಶ ಶುದ್ಧಿ ಮಾಡುತ್ತದೆ ಎಂದು ಹೇಳಿದರು.

ಜನಪದ ಶೈಲಿಯ ಉತ್ತಮ ಆರೋಗ್ಯಕ್ಕೆ ಸಹಕಾರಿ ವೇದಮಂತ್ರ ಮೆದುಳಿಗೆ ಶಕ್ತಿ ಹೆಚ್ಚಿಸುತ್ತದೆ. ಹಿಂದೂಸ್ತಾನಿ ಕರ್ನಾಟಿಕ್ ಸಂಗೀತ ಪ್ರದರ್ಶನಕ್ಕೆ ವಿದೇಶಗಳಲ್ಲಿ ಗೌರವವಿದೆ. ಕಟ್ಟುನಿಟ್ಟಿನ ಸಂಗೀತ ಪ್ರಕಾರದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಮಕ್ಕಳನ್ನು ಕಡ್ಡಾಯವಾಗಿ ಸಂಗೀತ ಶಾಲೆಗೆ ಸೇರಿಸಿದರೆ ಮುಂದಿನ ಅವರ ಭವಿಷ್ಯ ಉಜ್ವಲವಾಗಿರುತ್ತದೆ ಇಂದಿನ ಕಾಲದಲ್ಲಿ ಆಕಾಶವಾಣಿ ದೂರದರ್ಶನದಲ್ಲಿ ಸಂಗೀತ ಕಾರ್ಯಕ್ರಮಗಳು ಜನಸಾಮಾನ್ಯರು ಅವಲಂಬಿತರಾಗಿದ್ದರು ಅದು ಆರೋಗ್ಯದ ಮನಃಶಾಂತಿ ಹೆಚ್ಚಾಗಿ ಸಿಗುತ್ತದೆ ಎಂದು ಸ್ಮರಿಸಿದರು.

ಬಳಿಕ ಮಾತನಾಡಿದ ಸಂಗೀತ ನಿರ್ದೇಶಕರಾದ ಲಯ ಕೋಕಿಲ, ಶ್ರದ್ಧೆ ಮತ್ತು ಛಲದಿಂದ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಯಾವುದೇ ಕಲೆಯ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಮುನ್ನ ಶ್ರದ್ಧೆ ಮತ್ತು ಛಲದಿಂದ ಅದನ್ನು ಕರಗತ ಮಾಡಿಕೊಳ್ಳುವ ಅವಿರತ ಪ್ರಯತ್ನ ಇರಬೇಕು ಎಂದು ಹೇಳಿದರು

ಕೊರೋಕೆ ಸ್ಪರ್ಧೆಯಲ್ಲಿ 50 ಹೆಚ್ಚು ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.

ಇದೇ ಸಂದರ್ಭದಲ್ಲಿ ಸ್ವರ ಸಂಭ್ರಮ ಕಾರ್ಯಕ್ರಮದ ಆಯೋಜಕರಾದ ನಟ, ನಿರ್ಮಾಪಕ ಹಾಗೂ ಕಲಾಭೂಮಿ ಪ್ರತಿಷ್ಠಾನದ ಅಧ್ಯಕ್ಷ ಆಸ್ಕರ್ ಕೃಷ್ಣ, ನಿರ್ದೇಶಕರಾದ ನಿಂಗರಾಜು, ಒಂದು ಹೆಜ್ಜೆ ರಕ್ತದಾನಿಗಳ ಬಳಗದ ಅಧ್ಯಕ್ಷ ರಕ್ತದಾನ ಮಂಜು , ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಎಸ್ ಇ , ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ಸಮೃದ್ಧಿ ವಾರ್ತೆ ಪತ್ರಿಕೆ ಸಂಸ್ಥಾಪಕರು ಸಹನಾ ಗೌಡ,ಮನೋರೋಗ ತಜ್ಞರಾದ ಡಾಕ್ಟರ್ ರೇಖಾ ಮನಶಾಂತಿ ಹಾಗೂ ಇನ್ನಿತರರು ಭಾಗವಹಿಸಿದ್ದರು.

Tags:
error: Content is protected !!