Mysore
26
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

‘ನನ್ನ ನಗರ ನನ್ನ ಜವಾಬ್ದಾರಿ’ ಸಕ್ರಿಯ ನಾಗರಿಕತ್ವದ ಕೈಪಿಡಿ ಬಿಡುಗಡೆ

ಮೈಸೂರು: ನಗರದ ಗೋಕುಲಂ ೨ನೇ ಹಂತದಲ್ಲಿ ಎಸ್‌ಪಿಆರ್ ರೆಸ್ಟೋರೆಂಟ್‌ನಲ್ಲಿ ಜನಾಗ್ರಹ ಸಂಸ್ಥೆ ಸಿದ್ದಪಡಿಸಿರುವ ‘ನನ್ನ ನಗರ ನನ್ನ ಜವಾಬ್ದಾರಿ’ ಸಕ್ರಿಯ ನಾಗರಿಕತ್ವದ ಕೈಪಿಡಿಯನ್ನು ಮೈಸೂರು ವಾರ್ಡ್ ಸಮಿತಿ ಬಳಗದ ಆಶ್ರಯದಲ್ಲಿ ಬಿಡುಗಡೆಗೊಳಿಸಲಾಯಿತು.

ಜನಾಗ್ರಹ ಸಂಸ್ಥೆಯ ರಾಜ್ಯ ಮುಖ್ಯಸ್ಥ ಮಂಜುನಾಥ್ ಹಂಪಾಪುರ ಮಾತನಾಡಿ, ಸಕ್ರಿಯ ನಾಗರಿಕತ್ವದ ಕೈಪಿಡಿಯು ಸ್ಥಳೀಯ ಸರ್ಕಾರ ಮತ್ತು ನಾಗರಿಕರು ಹೇಗೆ ಸಮನ್ವಯದಿಂದ ಸ್ಥಳೀಯ ಮಟ್ಟದ ಕಸದ ಸಮಸ್ಯೆಯಿಂದ ಹಿಡಿದು ಹವಾಮಾನ ವೈಪರೀತ್ಯದಂತಹ ದೊಡ್ಡ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸುವುದರ ಮೂಲಕ ಹೇಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬಹುದು ಎನ್ನುವುದನ್ನು ತಿಳಿಸುತ್ತದೆ ಎಂದರು.

ಮೈಸೂರು ವಾರ್ಡ್ ಸಮಿತಿ ಬಳಗದ ಹಿರಿಯ ಸದಸ್ಯ ವೆಂಕಟೇಶ್ ಕರಾಡಿ ಮಾತನಾಡಿ, ಮೈಸೂರು ನಗರದ ವಸ್ತುಸ್ಥಿತಿ ನೋಡಿದರೆ ಈ ನನ್ನ ನಗರ ನನ್ನ ಜವಾಬ್ದಾರಿ ಸಕ್ರಿಯ ನಾಗರಿಕತ್ವದ ಕೈಪಿಡಿಯು ನಾಗರಿಕರಿಗೆ ಹೇಗೆ ನನ್ನ ನಗರದ ಅಭಿವೃದ್ಧಿಗೆ ಸರ್ಕಾರದ ಜೊತೆಗೆ ಕಾರ್ಯನಿರ್ವಹಿಸಬೇಕು.

ಹಾಗೆಯೇ ನಾಗರಿಕನಾಗಿ ನನ್ನ ನಗರದ ನನ್ನ ವಾರ್ಡ್‌ನಲ್ಲಿ ನನ್ನ ಕೊಡುಗೆ ಮತ್ತು ಜವಾಬ್ದಾರಿ ಏನು ಎಂಬುದನ್ನು ಸ್ವವಿವರವಾಗಿ ತಿಳಿಸುವಂತಹ ಒಂದು ಉತ್ತಮ ಪ್ರಯತ್ನವಾಗಿದೆ ಎಂದರು.

ಮೈಸೂರು ವಾರ್ಡ್ ಸಮಿತಿ ಬಳಗದ ಸದಸ್ಯರಾದ ಮಾಳವಿಕಾ ಗುಬ್ಬಿವಾಣಿ, ರೇಣು ಅಗರ್‌ವಾಲ್, ಶಶಿಧರ್, ದಯಾನಂದ್ ಸಾಗರ್, ಪ್ರಭಾ ನಂದೀಶ್, ಗೀತಾ, ಲೀಲಾ ವೆಂಕಟೇಶ್, ಜೋಸೆಫ್ ರಾಬಿನ್, ಡಾ.ಜಿ.ಪಾಂಡುರಂಗ ಮೂರ್ತಿ, ರವಿಶಂಕರ್ ನಾರಾಯಣ, ಎಸ್.ವಾಸು, ಶ್ರೀಕಾಂತ್, ಶುಶ್ರುತ, ಕುಶಾಲಿ ಜೈನ್, ಕೆಂಪಣ್ಣ, ಶ್ವೇತಾ ಕೃಷ್ಣಸ್ವಾಮಿ ಇತರರು ಹಾಜರಿದ್ದರು.

Tags: