ಮೈಸೂರು: ಜಿಲ್ಲೆಯ ಹುಣಸೂರು ತಾಲ್ಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಜಮೀನು ವಿವಾದಕ್ಕಾಗಿ ಒಂದೇ ಮನೆಯ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಪರಸ್ಪರ ಬಡಿದಾಡಿಕೊಂಡಿದ್ದಾರೆ.
ಹುಣಸೂರು ತಾಲ್ಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಏಪ್ರಿಲ್.9 ರಂದು ಘಟನೆ ನಡೆದಿದ್ದು, ಒಂದೇ ಕುಟುಂಬದಲ್ಲಿ ವಾಸವಾಗಿರುವ ಮೊದಲ ಹೆಂಡತಿ ಮಗ ಜಮೀನು ಉಳುಮೆ ಮಾಡುವುದನ್ನು ಪ್ರಶ್ನಿಸಿ ಎರಡನೇ ಹೆಂಡತಿ ಮಕ್ಕಳು ಆಕ್ಷೇಪ ವ್ಯಕ್ತಪಡಿಸಿ ಉಳುಮೆ ಮಾಡುತ್ತಿದ್ದ ಮಹೇಶ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಈ ಹಲ್ಲೆಯಲ್ಲಿ ಎರಡನೇ ಹೆಂಡತಿಯ ಮಕ್ಕಳು ಮಹೇಶ್ ಎಂಬಾತನ ಬೆನ್ನಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಇದೇ ವೇಳೆ ಮಹೇಶ್ ಅವರ ಮಗಳು ದಿವ್ಯಗೆ ಗಂಭೀರ ಗಾಯವಾಗಿದೆ.
ಒಂದೇ ಕುಟುಂಬಸ್ಥರು ಜಮೀನಿನಲ್ಲಿ ಪರಸ್ಪರ ಬಡಿದಾಡಿಕೊಳ್ಳುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯ ಬಗ್ಗೆ ಹುಣಸೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ. ಇನ್ನೂ ಹಲ್ಲೇ ಮಾಡಿದ ಆರು ಜನರಾದ ಭೈರೇಗೌಡ, ರಂಜಿತ್, ಪ್ರೇಮಮ್ಮ, ತೇಜಸ್ವಿನಿ, ರೇಣುಕಾ ಮತ್ತು ಪುಟ್ಟ ಲಕ್ಷ್ಮಮ್ಮ ಎಂಬುವರ ಮೇಲೆ ಎಫ್ಐಆರ್ ದಾಖಲಾಗಿದೆ.





