Mysore
28
few clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಬಿ.ಎಸ್‌.ಯಡಿಯೂರಪ್ಪನವರು ತಳಮಟ್ಟದಿಂದ ಪಕ್ಷ ಕಟ್ಟಿದ್ದಾರೆ: ಎಲ್‌.ನಾಗೇಂದ್ರ

Pakistani visa

ಮೈಸೂರು: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದಾರೆ. ಅವರ ಬಗ್ಗೆ ಹಾದಿ ಬಿದೀಲಿ ನಿಂತು ಹೇಳಿಕೆಗಳನ್ನು ನೀಡಬಾರದು ಎಂದು ಮೈಸೂರು ನಗರ ಘಟಕದ ಅಧ್ಯಕ್ಷ ಎಲ್‌.ನಾಗೇಂದ್ರ ವಾಗ್ದಾಳಿ ನಡೆಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಇಂದು(ಫೆಬ್ರವರಿ.೭) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷ ಎರಡು ಕ್ಷೇತ್ರಗಳಿಗೆ ಮಾತ್ರ ಸಿಮೀತವಾಗಿತ್ತು. ಅದನ್ನು ಈ ಮಟ್ಟಕ್ಕೆ ತರುವಲ್ಲಿ ಯಡಿಯೂರಪ್ಪನವರ ಪಾತ್ರ ಅಪಾರವಾಗಿದೆ. ಅವರ ಬಗ್ಗೆ ಯಾರೇ ಹಗುರವಾಗಿ ಹೇಳಿಕೆ ನೀಡಿದರೂ ನಾವು ಅದನ್ನು ಸಹಿಸುವುದಿಲ್ಲ ಎಂದರು.

ಶಾಸಕ ಯತ್ನಾಳ್‌ ಅವರು ಒಂದು ಕ್ಷೇತ್ರದ ಶಾಸಕರಷ್ಟ, ಈ ಮೊದಲು ನಾನು ಸಹ ಶಾಸಕನಾಗಿದ್ದವನೇ. ಆದರೆ ಶಾಸಕದಲ್ಲಿದ್ದುಕೊಂಡು ಪಕ್ಷಕ್ಕೆ ಅಪಾರ ಕೊಡುಗೆ ನೀಡಿರುವ ಬಿಎಸ್ ವೈ ಬಗ್ಗೆ ಹಾದಿ ಬೀದಿಲಿ ನಿಂತು ಹೇಳಿಕೆಗಳನ್ನು ನೀಡಿದರೆ ಕಾರ್ಯಕರ್ತರಾಗಿ ಸಹಿಸುವುದಿಲ್ಲ. ಪಕ್ಷದ ಮಾನ ಮರ್ಯಾದೆಯನ್ನ ಬೀದಿಯಲ್ಲಿ ಕಳೆಯೋಕೆ ಹೋಗಬೇಡಿ. ಬೇಕಿದ್ದರೇ ಹೈಕಮಾಂಡ್ ಜೊತೆ ಕುಳಿತು ಚರ್ಚಿಸಿ ಎಂದು ಹೇಳಿದರು.

ಇನ್ನೂ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿರುವುದು ರಾಷ್ಟ್ರೀಯ ನಾಯಕರು. ಹೀಗಿದ್ದರೂ ಹಾದಿ ಬೀದಿಯಲ್ಲಿ ನಿಂತು ಹೇಳಿಕೆಗಳನ್ನು ನೀಡಿ ತಮ್ಮ ಮರ್ಯಾದೆಯನ್ನು ತಾವೇ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅವರ ನಡೆಯಿಂದ ಕಾರ್ಯಕರ್ತರಿಗೆ ಭಾರಿ ನೋವುಂಟಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತದಿಂದಾಗಿ ನಾಳೆ ಚುನಾವಣೆ ಬಂದರೂ ಕೂಡ ಬಿಜೆಪಿ ಗೆಲ್ಲುವ ವಾತಾವರಣ ಇದೆ. ಇಂತಹ ಸಂದರ್ಭದಲ್ಲಿ ಹಾದಿ ಬೀದಿಯಲ್ಲಿ ಗಲಾಟೆ ಮಾಡಿಕೊಂಡು ಕಾರ್ಯಕರ್ತರು ತಲೆ ತಗ್ಗಿಸುವ ಹಾಗೆ ಮಾಡಬೇಡಿ ಆಗ್ರಹಿಸಿದರು.

Tags:
error: Content is protected !!