ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಮಾರ್ಗದಲ್ಲಿ ಸಂಚರಿಸುವವರು ಇಂದು (ಜೂನ್.25) ಬದಲಿ ಮಾರ್ಗ ಅನುಸರಿಸುವುದು ಒಳ್ಳೆಯದು. ಕುಕ್ಕರಹಳ್ಳಿ ಕೆರೆಯಿಂದ ಬೋಗಾಧಿ ಮಾರ್ಗವಾಗಿ ಸಂಚರಿಸುವ ರಸ್ತೆಗೆ ಡಾಂಬರೀಕರಣ ಕಾರ್ಯ ನಡೆಯುತ್ತಿದ್ದು, ಸವಾರರು ಬದಲಿ ಮಾರ್ಗವನ್ನು ಅನುಸರಿಸುವುದು ಒಳಿತಾಗಿದೆ.
ಇದನ್ನೂ ಓದಿ: ನನ್ನ ಹನಿಟ್ರ್ಯಾಪ್ ನಡೆದಿಲ್ಲ, ಪರಿಚಿತರನ್ನು ಬ್ಲಾಕ್ ಮೇಲ್ ಮಾಡಿದ್ದಾರೆ: ಹರೀಶ್‌ಗೌಡ ಸ್ಪಷ್ಟನೆ; https://andolana.in/state/harish-gowda-react-honeytrap/
ಮಂಗಳವಾರ ಮುಂಜಾನೆಯಿಂದಲೆ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಅದರ ಬದಲಿ ಮಾರ್ಗವನ್ನಾಗಿ ಸರಸ್ವತಿ ಪುರಂ ರಸ್ತೆಯನ್ನು ಸವಾರರು ಬಳಸಿಕೊಳ್ಳಬಹುದಾಗಿದೆ. ಬೆಳಗಿನಿಂದಲೇ ಬಸ್ ಸಂಚಾರ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳ ಓಟಾಟ ಹೆಚ್ಚಾಗಿರುವುದು ಕಂಡು ಬಂದಿದ್ದು, ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಬಯಸುವವರು ಕುಕ್ಕರಹಳ್ಳಿ ಕೆರೆಯಿಂದ ಬೋಗಾದಿ ಮಾರ್ಗದ ರಸ್ತೆ ಅನುಸರಿಸದೇ ಇರುವುದು ಒಳ್ಳೆಯದಾಗಿದೆ.





