ಮೈಸೂರು: ಕೆಎಸ್‌ಐಸಿ ಹೊರಗುತ್ತಿಗೆಯ 800 ನೌಕರರನ್ನು ನಾಳೆಯಿಂದ ಕೆಲಸಕ್ಕೆ ಬನ್ನಿ ಎಂದು ಆಡಳಿತ ಮಂಡಳಿ ಹೇಳಿದ್ದರಿಂದ ಆತಂಕಗೊಂಡ ನೌಕರರು ಪ್ರತಿಭಟನೆ ಮಾಡಿದ್ದಾರೆ.
ಗುತ್ತಿಗೆದಾರರು ಬದಲಾದ್ದರಿಂದ ಏ.2ರಿಂದ ಬರುವಂತೆ ತಿಳಿಸಿ ಗೇಟ್‌ಗೆ ಬೀಗ ಹಾಕಿದ್ದರು. ಇದರಿಂದ ನೌಕರರು ಸರ್ವೀಸ್ ಪರಿಗಣಿಸುವುದಿಲ್ಲ, ಹಳೆಯ ವೇತನ ಕೊಡುವುದಿಲ್ಲ ಎಂದು ಆತಂಕಗೊಡ್ಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದೇನೆ. ಸರ್ವೀಸ್, ಸಂಬಳ ಎಲ್ಲವೂ ಹಳೆಯದೇ ಇರಲಿದೆ. ನೌಕರರು ಆತಂಕಪಡುವ ಅಗತ್ಯವಿಲ್ಲ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.
ನೌಕರರೊಂದಿಗೆ ನಾವಿದ್ದೇವೆ. ಅವರ ಜತೆಗೆ ನಾವು ಹೋರಾಟ ಮಾಡುತ್ತೇವೆ ಎಂದರು.