Mysore
17
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಸ್ಥಾನಮಾನ ಬೇಕಿದ್ದರೆ ಪಕ್ಷದ ವರಿಷ್ಠರ ಬಳಿ ಬಂದು ಚರ್ಚೆ ಮಾಡಬೇಕು ಮಾಧ್ಯಮದವರ ಮುಂದೆ ಅಲ್ಲ ; ಸಚಿವ ಕೃಷ್ಣ ಭೈರೇಗೌಡ

ಮೈಸೂರು : ಯಾವುದಾದರೂ ಸ್ಥಾನಮಾನ ಬೇಕಿದ್ದರೆ ಅದನ್ನ ಪಕ್ಷದ  ವರಿಷ್ಠರ ಬಳಿ ಬಂದು ಚರ್ಚೆ ಮಾಡಬೇಕು ಹೊರತು ಮಾಧ್ಯಮದವರ ಮುಂದೆ ಬಂದು ತಮ್ಮ ಆಸೆ ಹೇಳಿಕೊಂಡರೆ ಏನು ಪ್ರಯೋಜನ ಎಂದು ಕೆ.ಎನ್‌ ರಾಜಣ್ಣಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಟಾಂಗ್‌ ಕೊಟ್ಟಿದ್ದಾರೆ.

ನಗರದಲ್ಲಿ ಕಾಂಗ್ರೆಸ್‌ ನಲ್ಲಿ ನಡೆಯುತ್ತಿರುವ ಹೆಚ್ಚುವರಿ ಡಿಸಿಎಂ ಹುದ್ದೆ ವಿಚಾರವಾಗಿ ಮಾತನಾಡಿದ ಅವರು, ನಿಮ್ಮ ಮುಂದೆ ಸ್ಥಾನ ಬೇಕು ಅಂತ ಹೇಳಿಕೊಂಡರೆ ನೀವೇನಾದರೂ ಕೊಡಿಸುತ್ತೀರಾ..? ಸ್ಥಾನಮಾನದ ವಿಚಾರವನ್ನು ವರಿಷ್ಠ ಬಳಿ ಮಾತ್ರ ಚರ್ಚೆ ಮಾಡಬೇಕು. ಮಾಧ್ಯಮದವರ ಬಳಿ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಿದರೆ ಅದರಿಂದ ಸರ್ಕಾರಕ್ಕೂ ಒಳ್ಳೆಯದು. ಜನರಿಗೂ ಒಳ್ಳೆಯದು. ಆ ವಿಚಾರ ಬಿಟ್ಟು ವೈಯಕ್ತಿಕ ವಿಚಾರ ಚರ್ಚೆ ಮಾಡಿದರೆ ಅದು ಸರ್ಕಾರಕ್ಕೆ ನಷ್ಟ ಎಂದು ಹೇಳಿದರು

Tags:
error: Content is protected !!