ಮೈಸೂರು : ಮೈಸೂರು-ಕೊಡಗು ಜಿಲ್ಲೆಯಲ್ಲಿ ಈ ಬಾರಿ ನಿರಂತರವಾಗಿ ಮಳೆಯಾಗುತ್ತಿದ್ದು, ಮಡಿಕೇರಿ ಹೆದ್ದಾರಿಯಲ್ಲಿ ಗುಡ್ಡ ಕುಸಿದಿದೆ.ಆದರೆ ಮಳೆ ಹಾನಿ ಪ್ರದೇಶಕ್ಕೆ ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ಭೇಟಿ ನೀಡಿ ಜನರ ಸಮಸ್ಯೆಗಳಲ್ಲಿ ಆಲಿಸಿಲ್ಲ. ಯಾಕೇ ಜನರು ಸಂಕಷ್ಟಕ್ಕೆ ಸಿಲುಕಿರುವುದು ಸಂಸದರಿಗೆ ತಿಳಿದಿಲ್ವಾ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಪ್ರಶ್ನೆ ಮಾಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ʻಈ ಬಾರಿ ನಿರಂತರವಾದ ಮಳೆಯಿಂದ ಜನರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಅವಾಂತರ ಸೃಷ್ಠಿಸಿದೆ. ಆದರೆ ಸಂಸದರು ಇನ್ನು ಭೇಟಿ ನೀಡಿಲ್ಲ. ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಯದುವೀರ್ ಒಡೆಯರ್ ಅವರಿಗೆ ೬೫ ಸಾವಿರ ಮತಗಳು ಬಂದಿದೆ. ಹೀಗಾಗಿ ಆ ಭಾಗದಲ್ಲೂ ಕೂಡ ಅವರು ಅಭಿವೃದ್ಧಿಗೆ ಗಮನಕೊಡಬೇಕು. ನಮ್ಮ ಸರ್ಕಾರ ನರ್ಮ್ ಯೋಜನೆಯಡಿ ೨ ಸಾವಿರ ಕೋಟಿ ರೂ ಅನುದಾನ ಬಿಡುಗಡೆ ಮಾಡಿಸಿದ್ದೇವೆ. ನೀವು ಅಭಿವೃದ್ಧಿಯತ್ತ ಗಮನ ಕೊಡಬೇಕುʼ ಎಂದು ಹೇಳಿದರು.