ಮೈಸೂರು : ಪ್ರೀತಿ-ಪ್ರೇಮದ ಗುಂಗಲ್ಲಿ ಜೀವ ಕಳೆದುಕೊಂಡ ಜೀವಗಳು ಅದೆಷ್ಟೋ, ಜೀವನದಲ್ಲಿ ತೆಗೆದುಕೊಳ್ಳೋ ಒಂದೇ ಒಂದು ನಿರ್ಧಾರ ಬದುಕಿನ ಆಟವನ್ನೇ ಬದಲಿಸಿ ಬಿಡುತ್ತೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿಯಂತಿದೆ.
ಎಂಬಿಬಿಎಸ್ ಓದಿ ವೈದ್ಯೆಯಾಗಿದ್ದ ಡಾ. ನಾಗಶ್ರೀ ಸಾವಿರಾರು ಜನರ ಕಷ್ಟಕ್ಕೆ ಸ್ಪಂದಿಸುವ ಕನಸು ಕಂಡಿದ್ದಳು. ಆದ್ರೆ ಜ್ಯೂನಿಯರ್ ವೈದ್ಯನ ಜೊತೆ ಪ್ರೇಮ ಪಾಶಕ್ಕೆ ಬಿದ್ದು 12 ವರ್ಷ ಜೀವಂತ ಶವವಾಗಿದ್ದಳು, ಇದೀಗ ಉಸಿರುಚೆಲ್ಲಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಡಾ. ನಾಗಶ್ರೀ ಆಯುರ್ವೇದ ವಿಭಾಗದಲ್ಲಿ ಪ್ರ್ಯಾಕ್ಟೀಸ್ ಮಾಡ್ತಿದ್ದರು. ಇದೇ ವೇಳೆ ಜೂನಿಯರ್ ವೈದ್ಯ ಡಾ. ವಿನಯ್ ಕುಮಾರ್ ಪರಿಚಯವಾಗಿದ್ದರು. ಡಾ. ನಾಗಶ್ರೀ ಜೊತೆಗೆ ಸಲುಗೆ ಪ್ರೀತಿ ನಾಟಕವಾಡಿ, ಬಳಿಕ ವಯಸ್ಸಿನಲ್ಲಿ ದೊಡ್ಡವಳು ಮನೆಯಲ್ಲಿ ಒಪ್ಪಲ್ಲ ಅಂತಾ ನಾಟಕವಾಡಿದ್ದಾನೆ. ಬಳಿಕ ಶ್ರೀರಂಗಪಟ್ಟಣ ಲಾಡ್ಜ್ ಗೆ ಕರೆದೊಯ್ದು ಸಾಯೋ ನಾಟಕವಾಡಿ, ಡಾ.ನಾಗಶ್ರೀಗೆ ನಿದ್ರೆ ಮಾತ್ರೆ ಹಾಗೂ ಓವರ್ ಡೋಸ್ ಇಂಜೆಕ್ಷನ್ ನೀಡಿದ್ದಾನೆ. ಈ ವೇಳೆ ತಾನೂ ಕೂಡ ಆತ್ಮಹತ್ಯೆ ಪ್ರಯತ್ನದ ನಾಟಕವಾಡಿ, ಬಳಿಕ ಘಟನೆಯಿಂದ ವೈದ್ಯೆ ಕೋಮಕ್ಕೆ ಜಾರಿದ್ದರು. ಒಂದೇ ದಿನದಲ್ಲಿ ಈತ ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಆದರೆ, ಕೋಮದಿಂದ ಹೊರಬಂದು 12 ವರ್ಷಗಳ ಕಾಲ ಜೀವಂತ ಶವವಾಗಿದ್ದ ನಾಗಶ್ರೀ ನಿನ್ನೆ ನಿಧನ ಹೊಂದಿದ್ದಾರೆ.
ಡಾ. ವಿನಯ್ ಕುಮಾರ್ ನಿಂದ ಈ ಹಿಂದೆ ಪ್ರಾಣ ಕಳೆದುಕೊಂಡಿದ್ದ ಚಾರ್ಟೆಡ್ ಅಕೌಂಟೆಡ್ ಗೌತಮಿ ಹಿರೇಮಠ ಪ್ರಕರಣ ಕೋರ್ಟ್‌ನಲ್ಲಿದ್ದು, ಸದ್ಯ ಬಿ.ರಿಪೋರ್ಟ್ ಸಲ್ಲಿಕೆಯಾಗಿದೆ. ಇವೆಲ್ಲಾ ಆದ ಬಳಿಕ ಆರೋಪಿ ಜೂನಿಯರ್ ವೈದ್ಯ ವಿನಯ್ ಕುಮಾರ್, ವಿನೋದಾ ಎಂಬಾಕೆ ಜೊತೆ ಮದುವೆಯಾದರು. ಇಲ್ಲಿಯೂ ಸಹ ಆತನ ಕಿರುಕುಳ ತಾಳಲಾರದೆ ಪತ್ನಿ ವಿನೋದ ಆತನನ್ನು ಬಿಟ್ಟರು. ಹುಣಸೂರು ತಾಲ್ಲೂಕಿನ ಹನಗೂಡಿನಲ್ಲಿ ವೈದ್ಯ ವಿನಯ್ ಕುಮಾರ್ ಕ್ಲಿನಿಕ್ ನಡೆಸುತ್ತಿದ್ದರು. ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಲು ವಕೀಲ ಪಾಂಡು ಪೂಜಾರಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.





