Mysore
20
clear sky

Social Media

ಶುಕ್ರವಾರ, 20 ಫೆಬ್ರವರಿ 2026
Light
Dark

ಕರ್ನಾಟಕ ರಫ್ತಿನಲ್ಲಿ ಮೊದಲ ಸ್ಥಾನಕ್ಕೆ ಬರಬೇಕು: ಟಿ ದಿನೇಶ್

ಮೈಸೂರು: ರಪ್ತು ಮಾಡುವುದರಿಂದ ವಿದೇಶಿ ವಿನಿಮಯದ ಜೊತೆಗೆ ದೇಶದ ಆದಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಟಿ ದಿನೇಶ್ ತಿಳಿಸಿದರು.

ಸೋಮವಾರ (ಜೂ.24) ನಗರದ ಹೋಟೆಲ್ ಪ್ರೆಸಿಡೆಂಟ್ನಲ್ಲಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ವತಿಯಿಂದ ರಪ್ತು ಹಮ್ಮಿಕೊಂಡಿದ್ದ ರಪ್ತು ನಿರ್ವಹಣಾ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಉದ್ದಿಮೆದಾರರಿಗೆ ನಾನು ಪ್ರತಿದಿನ ಹೊಸತನ್ನು ಕಲಿಯಬೇಕು ಎನ್ನುವ ಹಂಬಲ ಇರಬೇಕು. ದೇಶದಲ್ಲಿ 778 ಮಿಲಿಯನ್ ಡಾಲರ್ ಮೊತ್ತದ ವಸ್ತುಗಳನ್ನು ರಪ್ತು ಮಾಡಿದ್ದು, 860 ಮಿಲಿಯನ್ ಡಾಲರ್ ಮೊತ್ತದ ಸರಕನ್ನು ಆಮದನ್ನು ಮಾಡಿಕೊಂಡಿದ್ದೇವೆ. ಕರ್ನಾಟಕವು ರಪ್ತು ಮಾಡುವುದರಲ್ಲಿ 4ನೇ ಸ್ಥಾನದಲ್ಲಿ ಇದೆ. ನಮ್ಮ ರಾಜ್ಯವು ರಫ್ತಿನಲ್ಲಿ ಮೊದಲ ಸ್ಥಾನಕ್ಕೆ ಬರಬೇಕು ಎಂದರು.

ಭಾರತ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ರಫ್ತು ಉತ್ತೇಜನ ಕೇಂದ್ರವನ್ನು ಸ್ಥಾಪಿಸಿದೆ. ಮೈಸೂರು ಜಿಲ್ಲೆಯಲ್ಲಿಯೂ ಕೈಗಾರಿಕೆಗಳ ಸ್ಥಾಪನೆಗೆ ವಿಪುಲ ಅವಕಾಶಗಳಿವೆ. ಪ್ರತಿ ವರ್ಷ ಶೇಕಡಾ 5% ರಫ್ತನ್ನು ಹೆಚ್ಚಳ ಮಾಡಬೇಕು ಎಂದರು.

ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಜಂಟಿ ನಿರ್ದೇಶಕರಾದ ಸಿ ಎಸ್ ಬಾಬು ನಾಗೇಶ್ ಅವರು ಮಾತನಾಡಿ ತಾವೆಲ್ಲರೂ ಯುವ ಉದ್ಯಮಿಗಳು ಇದ್ದೀರಾ. 6 ದಿನಗಳ ಕಾಲ ಹಮ್ಮಿಕೊಂಡಿರುವ ಹಮ್ಮಿಕೊಂಡಿರುವ ರಪ್ತು ನಿರ್ವಹಣಾ ತರಬೇತಿಯನ್ನು ಸದುಪಯೋಗ ಪಡಿಸಿಕೊಳ್ಳಿ. ರಪ್ತು ಕೈಗಾರಿಕೆಗಳ ಆರ್ಥಿಕ ಆದಾಯವನ್ನು ಹೆಚ್ಚಿಸುತ್ತದೆ. ಇದರಿಂದ ಹೆಚ್ಚಿನ ಉತ್ಪಾದನೆ ಮಾಡಿ ಕೈಗಾರಿಕೆಯು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.

ಮೈಸೂರು ಕೈಗಾರಿಕಾ ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ ಲಿಂಗರಾಜು, ರಪ್ತು ಮಾಹಿತಿ ಕೇಂದ್ರದ ಉಪ ನಿರ್ದೇಶಕರಾದ ಮೇಘಲಾ ಸೇರಿದಂತೆ ಕೈಗಾರಿಕೋದ್ಯಮಿಗಳು ಉಪಸ್ತಿತರಿದ್ದರು.

Tags:
error: Content is protected !!