ಮೈಸೂರು: ಮೈಸೂರಿನ ಬಂಡಿಪಾಳ್ಯ ಎಪಿಎಂಸಿ ಗೇಟ್ ಮುಂಭಾಗ ಮದ್ಯದಂಗಡಿ ತೆರೆಯದಂತೆ ಆಗ್ರಹಿಸಿ ಅಬಕಾರಿ ಆಯುಕ್ತರ ಕಚೇರಿ ಮುಂಭಾಗ ಪ್ರತಿಭಟನೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ಬಂಡಿಪಾಳ್ಯ ಎಪಿಎಂಸಿ ಸುತ್ತಮುತ್ತ ಈಗಾಗಲೇ ಸಾಕಷ್ಟು ಮದ್ಯದಂಗಡಿ ತೆರೆಯಲಾಗಿದೆ. ಇದರ ನಡುವೆ ಎಪಿಎಂಸಿ ಗೇಟ್ ಮುಂಬಾಗವೇ ಬಾರ್ ತೆರೆಯಲು ಮುಂದಾಗಿದ್ದಾರೆ. ಎಪಿಎಂಸಿ ಗೆ ಕೆಲಸ ಮಾಡಲು ಬರುವ ಬಡವರು, ಕೂಲಿ, ಕಾರ್ಮಿಕರು ಕುಡಿತಕ್ಕೆ ದಾಸರಾಗುತ್ತಾರೆ. ಎಪಿಎಂಸಿ ಗೇಟ್ ಮುಂಭಾಗ ಬಾರ್ ತೆರೆಯಲಿಕ್ಕೆ ಸ್ಥಳೀಯರ ವಿರೋಧ ಇದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಶಂಕರ್ ಎಚ್ಚರಿಕೆ ನೀಡಿದರು.
ಯಾವುದೇ ಕಾರಣಕ್ಕೂ ಎಪಿಎಂಸಿ ಗೇಟ್ ಮುಂಭಾಗ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು. ಒಂದು ವೇಳೆ ಮದ್ಯದಂಗಡಿ ತೆರೆಯಲು ನೀಡಿದ್ರೆ ಆಹೋರಾತ್ರಿ ಪ್ರತಿಭಟನೆ ಮಾಡುತ್ತೇವೆ ಅವರು ತಿಳಿಸಿದರು.