ಮೈಸೂರು : ಹಿಂದಿ ಮಾತನಾಡುತ್ತಿದ್ದ ರೈಲ್ವೆ ಅಧಿಕಾರಿಗೆ ಕನ್ನಡ ಕಲಿಯುವಂತೆ ಕೇಂದ್ರ ಸಚಿವ ವಿ.ಸೋಮಣ್ಣ ಕ್ಲಾಸ್ ತಗೊಂಡಿದ್ದಾರೆ.
ಇಂದು ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣಕ್ಕೆ ಸಚಿವ ಭೇಟಿ ನೀಡಿ ಪರಿಶೀಲನೆ ನಡೆಸಿ ರೈಲ್ವೆ ಕಾಮಗಾರಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ವೇಳೆ ಕನ್ನಡ ಬರದೇ ಹಿಂದಿಯಲ್ಲಿ ವಿವರಿಸಿದ ರೈಲ್ವೆ ಅಧಿಕಾರಿಯಾದ DRM ಶಿಲ್ಪಾ ಅಗರ್ವಾವಾಲ್ ಅವರಿಗೆ ಸಚಿವ ವಿ ಸೋಮಣ್ಣ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕರ್ನಾಟಕಕ್ಕೆ ಬಂದು ಎಷ್ಟು ವರ್ಷ ಆಯ್ತಮ್ಮ? ಹೋಗಿ 3 ರೂಪಾಯಿ ಕೊಟ್ಟು ಒಂದ್ ಕನ್ನಡ ಪುಸ್ತಕ ತಗೊಂಡ್ ಕಲಿ.
ಕನ್ನಡ ಕಲಿಯೋಕೆ ಕೇವಲ 3 ರೂಪಾಯಿ ಇನ್ವೆಸ್ಟ್ ಮಾಡಮ್ಮ ಸಾಕು. ನಾನು ಡೆಲ್ಲಿಗೆ ಹೋಗಿ ಹಿಂದಿ ಕಲಿತಿದೀನಿ. ಮೈಸೂರಿಗೆ ಬಂದು ಎರಡು ವರ್ಷವಾಗಿದ್ರು ಕನ್ನಡ ಕಲಿತಿಲ್ವ ಎಂದು ಪ್ರಶ್ನಿಸಿದರು.
ಬಳಿಕ ಅಧಿಕಾರಿಗಳೊಂದಿಗೆ ಹಿಂದಿಯಲ್ಲೇ ಮಾತನಾಡಿ ಸಚಿವ ವಿ ಸೋಮಣ್ಣ ವಿವರ ಪಡೆದುಕೊಂಡರು.