- -ಎಚ್.ಎಸ್.ದಿನೇಶ್ ಕುಮಾರ್
ಮೈಸೂರು : ನಗರದ ಮೊದಲ ಸಸ್ಯೋದ್ಯಾನ(ಬಟಾನಿಕಲ್ ಗಾರ್ಡನ್) ಎಂಬ ಹೆಸರು ಹೊತ್ತು ಉದ್ಘಾಟನೆಗೆ ಸಿದ್ಧವಾಗಿರುವ ಲಿಂಗಾಂಬುಧಿ ಕೆರೆಯ ಪಕ್ಕದಲ್ಲಿರುವ ಗಾರ್ಡನ್ ಇಂದು ನಿರ್ಲಕ್ಷಿತ ಸ್ಥಳವಾಗಿ ಮಾರ್ಪಟ್ಟಿದೆ.
ಲಿಂಗಾಂಬುಧಿ ಕೆರೆಯ ಸಮೀಪ ತೋಟಗಾರಿಕೆ ಇಲಾಖೆಯ ವತಿಯಿಂದ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಬಟಾನಿಕಲ್ ಗಾರ್ಡನ್‌ಗೆ ನಗರದ ವಿವಿಧ ಬಡಾವಣೆಗಳಿಂದ ಕೊಳಚೆ ಹರಿದುಬರುತ್ತಿದ್ದು ಉದ್ಯಾನದೊಳಗಿನ ನೈಸರ್ಗಿಕ ಕೊಳಕ್ಕೆ ಸೇರುತ್ತಿದೆ. ಇದರಿಂದಾಗಿ ದುರ್ವಾಸನೆ ಹರಡುತ್ತಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶ ಕಲುಷಿತಗೊಳ್ಳುತ್ತಿದ್ದು, ಉದ್ಘಾಟನೆಗೂ ಮುನ್ನವೇ ತನ್ನ ಆಕರ್ಷಣೆುಂನ್ನು ಕಳೆದುಕೊಳ್ಳುತ್ತಾ ಸಾಗಿದೆ.
ಅಪರೂಪ ಕಮಲದ ಪ್ರಭೇದವಿದೆ : ಬಟಾನಿಕಲ್ ಗಾರ್ಡನ್‌ಗೆ ಹೊಂದಿಕೊಂಡಂತೆ ರಮಣೀಯವಾದ ಲಿಂಗಾಂಬುಧಿ ಕೆರೆ ಇದೆ. ವಿವಿಧ ಜಾತಿಗಗಳ ಮರಗಳೊಂದಿಗೆ ವಿಶಿಷ್ಟವಾದ ಬಿದಿರಿನ ಬ್ಲಾಕ್ ಅನ್ನು ಹೊಂದಿದೆ. ಉದ್ಯಾನವು ಅಪರೂಪದ ಕಮಲದ ಪ್ರಭೇದಗಳನ್ನು ಹೊಂದಿದೆ. ದಾರಿಯುದ್ದಕ್ಕೂ ಆಶ್ರಯ ಮತ್ತು ನೆರಳನ್ನು ಒದಗಿಸುವ ವ್ಯವಸ್ಥೆ ವಾಡಲಾಗಿದೆ.
ಮುಮ್ಮಡಿ ಕೃಷ್ಣರಾಜ ಒಡೆುಂರ್ 1828ರಲ್ಲಿ ಮಹಾರಾಣಿ ಕೃಷ್ಣ ವಿಲಾಸ ಲಿಂಗರಾಜಮ್ಮಣ್ಣಿ ಅವರ ನೆನಪಿಗಾಗಿ ಶ್ರೀರಾಂಪುರ 2ನೇ ಹಂತದಲ್ಲಿ ಲಿಂಗಾಂಬುಧಿ ಕೆರೆಯನ್ನು ನಿರ್ಮಿಸಿದ್ದಾರೆ. ಕೆರೆಯು 250 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಒಟ್ಟು 30 ಎಕರೆಗಳಲ್ಲಿ 15 ಎಕರೆ ಪ್ರದೇಶದಲ್ಲಿ ಬಟಾನಿಕಲ್ ಗಾರ್ಡನ್ ಅನ್ನು ನಿರ್ಮಿಸಲಾಗಿದೆ.
4 ಕೋಟಿ ರೂ. ವೆಚ್ಚ : 2011 ರಲ್ಲಿ ಲಾಲ್‌ಬಾಗ್ ಸಸ್ಯೋದ್ಯಾನ ಮತ್ತು ಊಟಿಯಲ್ಲಿರುವ ಬಟಾನಿಕಲ್ ಗಾರ್ಡನ್ ಮಾದರಿಲ್ಲಿ ಲಿಂಗಾಂಬುಧಿ ಬಟಾನಿಕಲ್ ಗಾರ್ಡನ್ ಕಲ್ಪನೆಯನ್ನು ತರಲಾಯಿತು. ಉದ್ಯಾನದ ಸೌಂದರ್ಯ ಹೆಚ್ಚಿಸುವ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿದ್ದು, ಕೊಳಚೆ ನೀರು ತುಂಬಿದ ಕೆರೆೊಂಂದಿಗೆ ಉದ್ಘಾಟನೆಗೆ ಸಿದ್ಧವಾಗಿದೆ. ಉದ್ಯಾನ ನಿರ್ಮಿಸಲು ಸುವಾರು 4 ಕೋಟಿ ರೂ. ವೆಚ್ಚ ವಾಡಲಾಗಿದೆ. ಲಿಂಗಾಂಬುಧಿ ಕೆರೆ ಮತ್ತು ಕೊಳಚೆ ನೀರಿನ ಒಂದು ವಾರ್ಗವು ಬಟಾನಿಕಲ್ ಗಾರ್ಡನ್ ಕೊಳವನ್ನು ಪ್ರವೇಶಿಸುತ್ತಿದೆ. ತೋಟಗಾರಿಕಾ ಇಲಾಖೆಯು ನಗರಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆಗೆ ಪತ್ರಗಳನ್ನು ಬರೆದು ಕೊಳಚೆ ನೀರಿನ ಮಾರ್ಗವನ್ನು ತಡೆಯಬೇಕೆಂದು ಮನವಿ ಮಾಡಿದೆ.
ಈ ಗಾರ್ಡನ್ ಊಟಿಲ್ಲಿರುವ ಗಾರ್ಡ್‌ನ್‌ಗೆ ಸರಿಸಾಟಿಯಾಗಿದೆ. ಜನಾಕರ್ಷಣೆಗೆ ಬೇಕಾದ ಎಲ್ಲವೂ ಇಲ್ಲಿದೆ. ಆದರೆ, ಇಲ್ಲಿಗೆ ಕೊಳಚೆ ನೀರು ಹರಿಯುವ ನೈಜ ಪ್ರದೇಶಗಳು ಇನ್ನೂ ಪತ್ತೆಯಾಗಿಲ್ಲ. ಆದರೂ ಅರವಿಂದನಗರ, ದಟ್ಟಗಳ್ಳಿ, ರಾಮಕೃಷ್ಣನಗರ ಮುಂತಾದ ಪ್ರದೇಶಗಳಿಂದ ನೀರು ಬರುತ್ತಿದೆ ಎಂದು ಅಂದಾಜಿಸಲಾಗಿದೆ. ಈಗಲಾದರೂ ಸಂಬಂಧಪಟ್ಟವರು ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಜನರ ತೆರಿಗೆ ಹಣ ವ್ಯರ್ಥವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಆಕರ್ಷನೀಯ ಉದ್ಯಾನದ ಶೋಚನೀಯ ಸ್ಥಿತಿ : ಇಲ್ಲಿ ವಿವಿಧ ಬಗೆಯ ಔಷಧೀಯ ಮತ್ತು ಆರೊಮ್ಯಾಟಿಕ್ ಉದ್ಯಾನ, ಗುಲಾಬಿ ಉದ್ಯಾನ, ಸಸ್ಯಾಲಂಕರಣ ಉದ್ಯಾನ, ಚಿಟ್ಟೆ ಉದ್ಯಾನ, ಬಿದಿರಿನ ಬ್ಲಾಕ್, ಅರ್ಬೊರೇಟಮ್‌ಗಳು. ಸುಗಂಧ ಬ್ಲಾಕ್, ಪಾಲ್ಮಾಟಮ್ ವಿಭಾಗ, ಸಣ್ಣ ಹಣ್ಣಿನ ಬ್ಲಾಕ್ ಮತ್ತು ಜಲ ಪಕ್ಷಿಗಳನ್ನು ಆಕರ್ಷಿಸಲು ನೀರಿನ ಕೊಳಗಳನ್ನು ನಿರ್ಮಿಸಲಾಗಿದೆ. ಇಂಜಿನಿಯರ್‌ಗಳು ಮತ್ತು ಲ್ಯಾಂಡ್‌ಸ್ಕೇಪರ್‌ಗಳು ಜಲ ಮೂಲವನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಟನ್‌ಗಟ್ಟಲೆ ಹೂಳನ್ನು ವೈಜ್ಞಾನಿಕವಾಗಿ ತೆಗೆದು ಹಾಕಲಾಗಿದೆ. ಶುದ್ಧ ನೀರನ್ನು ಹಿಡಿದಿಡಲು ಬಂಡ್ ಅನ್ನು ನಿರ್ಮಿಸಲಾಗಿದೆ. ವಿಪರ್ಯಾಸವೆಂದರೆ ಕೊಳದ ಈಗಿನ ಸ್ಥಿತಿ ಶೋಚನೀಯವಾಗಿದೆ. ಪ್ರತಿದಿನ ಸಾಕಷ್ಟು ಕೊಳಚೆ ನೀರು ಕೆರೆಗೆ ಹರಿಯುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಸಿಗದಿದ್ದರೆ ಮೈಸೂರು ನಗರದ ಪ್ರಮುಖ ಪ್ರವಾಸಿ ತಾಣವಾಗಲಿರುವ ಈ ಸಸ್ಯೋದ್ಯಾನ ನಿರ್ಲಕ್ಷಿತ ಸ್ಥಳವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ.