ಕಂಪಲಾಪುರ: ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ಗ್ರಾಮದ ಎ.ಮಂಜುನಾಥ್ ಎಂಬವರ ತೋಟದಲ್ಲಿ ಕಳೆದ ವರ್ಷ ನಾಟಿ ಮಾಡಿದ್ದ 2 ಸಾವಿರ ಬಾಳೆ ಗಿಡಗಳು, ಕಟಾವಿಗೆ ಬಂದಿರುವ 500 ಬಾಳೆ ಗಿಡಗಳು ಮಳೆ ಗಾಳಿಗೆ ನೆಲಕ್ಕುರಳಿವೆ.
ಗುರುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಬಾಳೆ ಗಿಡಗಳು ನಾಶವಾಗಿವೆ. ಈ ಕುರಿತು ರೈತ ಮಂಜುನಾಥ್ ಮಾತನಾಡಿ, ಕಳೆದ ವರ್ಷ 2 ಸಾವಿರ ಬಾಳೆ ನಾಟಿ ಮಾಡಿದ್ದೆ. ಹಣ ಖರ್ಚು ಮಾಡಿ ಹನಿ ನೀರಾವರಿ ಅಳವಡಿಸಿದ್ದೆ. ಒಂದು ವಾರದಲ್ಲಿ ಕಟಾವು ಮಾಡಬೇಕಾಗಿತ್ತು. ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇದೆ. ಮಾಡಿರುವ ಸಾಲ ತೀರಿಸುವ ಲೆಕ್ಕಾಚಾರ ಮಾಡಿದ್ದೆ, ಆದರೆ ಬಿರುಗಾಳಿಗೆ ಬಾಳೆ ಗಿಡಗಳು ನೆಲಕ್ಕುರಳಿವೆ. ನನಗೆ 1ಲಕ್ಷ ರೂ.ನಷ್ಟು ನಷ್ಟವಾಗಿದೆ ಎಂದರು.





