Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕಬಿನಿ ಜಲಾಶಯದಿಂದ ೩೬ ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಮೈಸೂರು : ಸತತ ಮಳೆಯಿಂದಾಗಿ ಎಚ್‌ ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಒಳಹರಿವು ಹೆಚ್ಚಳವಾಗಿದ್ದು, ೩೬ ಸಾವಿರ ಕ್ಯೂಸೆಕ್‌ ನೀರನ್ನು ಹೊರಕ್ಕೆ ಬಿಡಲಾಗಿದೆ.

ಈಗಾಗಲೇ ಕಬಿನಿ ಡ್ಯಾಂನಿಂದ ೨೦ ಸಾವಿರ ಕ್ಯೂಸೆಕ್‌ ನೀರನ್ನ ಕಳೆದ ೭ ದಿನಗಳಿಂದ ದಿನನಿತ್ಯ ಬಿಡಲಾಗುತ್ತಿತ್ತು. ನಿನ್ನೆ ಜಲಾಶಯದಿಂದ ೨೫ ಸಾವಿರ ಕ್ಯೂಸೆಕ್‌ ನೀರು ಬಿಡಲಾಗಿತ್ತು. ಇದು ಒಳಹರಿವು ಹೆಚ್ಚಳವಾದ ಕಾರಣ ಜಲಾಶಯದಿಂದ ೩೬ ಸಾವಿರ ಕ್ಯೂಸಕ್‌ ನೀರು ನದಿಗೆ ಬಿಡಲಾಗಿದೆ.

ಇನ್ನು ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ಸತತವಾಗಿ  ಮಳೆ ಸುರಿಯುತ್ತಿರುವುದರಿಂದ ಜಲಾಶಯದ ಒಳಹರಿವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಇದೆ. ಹಾಗಾಗಿ ನದಿ ಪಾತ್ರದ ಜನತೆ ಎಚ್ಚರಿಕೆಯಿಂದ ಇರಲು ಮತ್ತು ಜಾನುವಾರುಗಳನ್ನ ಸುರಕ್ಷಿತ ಸ್ಥಳಕ್ಕೆ ರವಾನಿಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Tags: