ಮೈಸೂರು : ಕಬಿನಿ ಜಲಾನಯನ ಪ್ರದೇಶದಲ್ಲೂ ಕೂಡ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಎಚ್ ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.
ಈ ಕಬಿನಿ ಜಲಾಶಯದಿಂದ ಕಪಿಲಾ ನದಿಗೆ ೨೦ ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಇನ್ನು ಹೆಚ್ಚಿನ ನೀರು ಜಲಾಶಯದಿಂದ ಬಿಟ್ಟಿರುವುದರಿಂದ ಕಪಿಲಾ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಧ್ವನಿ ವರ್ಧಕಗಳ ಮೂಲಕ ಹುಲ್ಲಹಳ್ಳಿ ಗ್ರಾಮಪಂಚಾಯಿತಿ ಕಾರ್ಯಾಲಯವತಿಯಿಂದ ಸೂಚನೆ ನೀಡಲಾಗುತ್ತದೆ.
ಅಲ್ಲದೆ ಕಪಿಲಾ ನದಿ ವ್ಯಾಪ್ತಿಯ ನಂಜನಗೂಡು ತಾಲೂಕಿನ ಹೆಜ್ಜಗೆ, ಬೊಕ್ಕಹಳ್ಳಿ, ಸುತ್ತೂರು ಹೊಸಕೋಟೆಯಲ್ಲಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ.