Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಪತ್ರಕರ್ತ, ಉಪನ್ಯಾಸಕ ಲೋಕೇಶ್‌ ಮೊಸಳೆಗೆ ಪಿತೃ ವಿಯೋಗ

ಮೈಸೂರು: ಪತ್ರಕರ್ತ, ಉಪನ್ಯಾಸಕ ಹಾಗೂ ವನ್ಯಜೀವಿ ಛಾಯಾಗ್ರಾಹಕ ಲೋಕೇಶ್‌ ಮೊಸಳೆ ಅವರ ತಂದೆ, ನಿವೃತ್ತ ಶಿಕ್ಷಕ ಕೆ.ಎಂ ರಂಗೇಗೌಡ(85) ಅವರು ಗುರುವಾರ ಮಧ್ಯರಾತ್ರಿ ನಿಧನರಾದರು.

ವಯೋಸಹಜ ಕಾಯಿಲೆ ಬಳಲುತ್ತಿದ್ದ ಅವರು, ತಮ್ಮ ಮನೆಯಲ್ಲಿಯೆ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತ್ನಿ ಮಂಗಳಾ, ಪುತ್ರರಾದ ಲೋಕೇಶ್‌ ಮೊಸಳೆ, ಎಂ.ಆರ್‌ ದಿನೇಶ್‌ ಅವರನ್ನು ಅಗಲಿದ್ದಾರೆ.

ಹಾಸನ ಜಿಲ್ಲೆಯ ಮೊಸಳೆ ಗ್ರಾಮದವರಾದ ಅವರು, ಹಾಸನ ತಮ್ಮ ಊರಿನಲ್ಲೇ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿ ನಂತರ ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಬಳಿಕ ಮೈಸೂರಿನಲ್ಲಿ ನಿವೃತ್ತಿರಾಗಿದ್ದರು.

ಮರಗಿಡಗಳ ಪ್ರೇಮಿಯಾಗಿದ್ದ ಅವರು, ತಾವು ಕಾರ್ತವ್ಯ ನಿರ್ವಹಿಸಿದ ಜಾಗಗಳೆಲ್ಲೆಲ್ಲಾ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದರು.

ಮೃತರ ಅಂತ್ಯಕ್ರಿಯೆಯು ನಗರದ ಆದಿಚುಂಚನಗಿರಿ ರಸ್ತೆಯ ರುದ್ಯಭೂಮಿಯಲ್ಲಿ ಗುರುವಾರ ಮಧ್ಯಾಹ್ಯ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags: