Mysore
13
clear sky

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಜೆಡಿಎಸ್‌ ಕಾರ್ಯಕರ್ತರ ಗದ್ದಲ: ನಾಮಪತ್ರ ಸಲ್ಲಿಸದ ಶ್ರೀಕಂಠೇಗೌಡ

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿಜೆಪಿ-ಜೆಡಿಎಸ್‌ ಮೈತ್ರಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಕೆ.ಟಿ ಶ್ರೀಕಂಠೇಗೌಡ ಅವರು ಮೈತ್ರಿ ಟಿಕೆಟ್‌ ಸಿಗದ ಹಿನ್ನೆಲೆ ಇಂದು(ಮೇ.16) ನಗರದ ಆಲಮ್ಮ ಕಲ್ಯಾಣ ಮಂಟಪದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ಹಮ್ಮಿಕೊಂಡಿದ್ದರು.

ಸಭೆಯಲ್ಲಿ ಶ್ರೀಕಂಠೇಗೌಡರ ಬೆಂಬಲಿಗರು ಪಕ್ಷೇತರರಾಗಿ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದರು. ಇನ್ನೊಂದಿಷ್ಟು ಜೆಡಿಎಸ್‌ ಕಾರ್ಯಕರ್ತರು ನಾಮಪತ್ರ ಸಲ್ಲಿಸದಂತೆ ಶ್ರೀಕಂಠೇಗೌಡರನ್ನು ಎಳೆದಾಡಿ, ಕಾರ್ಯಕರ್ತರು ಗದ್ದಲ ಎಬ್ಬಿಸಿದರು. ಪರಸ್ಪರ ಬೆಂಬಲಿಗರು ಮತ್ತು ಜೆಡಿಎಸ್ ಅಭ್ಯರ್ಥಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಗಾಯಗೊಂಡ ಶ್ರೀಕಂಠೇಗೌಡರು ಆಸ್ಪತ್ರೆ ಸೇರಿದ್ದು ನಾಮಪತ್ರ ಸಲ್ಲಿಸಲು ಆಗಲಿಲ್ಲ.

ನಾಮಪತ್ರ ಸಲ್ಲಿಕೆಗೆ ಗುರುವಾರ (ಮೇ.16) ಕೊನೆಯ ದಿನವಾಗಿತ್ತು.

Tags:
error: Content is protected !!