Mysore
20
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಬ್ರಿಟಿಷರು ಬರೆದ ಇತಿಹಾಸವನ್ನೇ ಓದುವಂತಾಗಿದೆ, ಅದು ಬದಲಾಗಬೇಕು : ಎಸ್‌.ಎಲ್‌.ಭೈರಪ್ಪ

ಮೈಸೂರು : ಸಾವ್ರಾಜ್ಯ ರಕ್ಷಣೆಗಾಗಿ ಬ್ರಿಟಿಷರು ಭಾರತೀಯರ ಇತಿಹಾಸ, ತತ್ವಶಾಸ್ತ್ರವನ್ನು ತಮಗೆ ಬೇಕಾದಂತೆ ಬರೆದುಕೊಂಡಿದ್ದು, ನಾವು ಬ್ರಿಟಿಷರು ಬರೆದ ಇತಿಹಾಸವನ್ನೇ ಓದುವಂತಾಗಿದೆ. ಅದು ಬದಲಾಗಬೇಕು ಎಂದು ಖ್ಯಾತ ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಹೇಳಿದರು.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಝೀರೊ ಡಿಗ್ರಿ ಪ್ರಕಾಶನದ ಸಂಸ್ಥೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ತಮ್ಮ ವಂಶವೃಕ್ಷೆ ಕಾದಂಬರಿಯ ತಮಿಳು ಅವತರಣಿಕೆ ವಂಶವೃಕ್ಷಂ ಎಂಬ ಕೃತಿಯನ್ನು ಬಿಡುಗಡೆ ಮಾಡಿ ಅನುವಾದಕ ಕೆ.ನಲ್ಲ ತಂಬಿ ಅವರನ್ನು ಅಭಿನಂದಿಸಿ ಮಾತನಾಡಿ, ದೇಶದ ಎಲ್ಲ ಭಾಷೆಗಳಿಗೂ ನನ್ನ ಬಹುತೇಕ ಕಾದಂಬರಿಗಳು ಅನುವಾದಗೊಂಡಿದ್ದರೂ, ಇದುವರೆಗೂ ತಮಿಳು ಭಾಷೆಗೆ ಅನುವಾದ ಆಗಿರಲಿಲ್ಲ. ಬೇರೆ ಭಾಷೆಗೆ ನನ್ನ ಕೃತಿಯನ್ನು ಅನುವಾದ ಮಾಡಲು ನಾನು ತಕ್ಷಣಕ್ಕೆ ಅನುಮತಿ ಕೊಡುವುದಿಲ್ಲ. ಅನುಮತಿ ನೀಡಬೇಕೋ ಬೇಡವೋ ಎಂದು ಆಲೋಚನೆ ಮಾಡುತ್ತೇನೆ. ಸ್ನೇಹಿತ ಡಾ.ಚಂದ್ರಶೇಖರ್ ವಂಶವೃಕ್ಷೆ ಕಾದಂಬರಿಯನ್ನು ತಮಿಳಿಗೆ ಅನುವಾದ ಮಾಡಲು ನಲ್ಲತಂಬಿ ಬಂದಿದ್ದಾರೆ.ಬಹಳ ಚೆನ್ನಾಗಿ ಅನುವಾದ ಮಾಡುತ್ತಾರೆ. ಒಪ್ಪಿಗೆಕೊಡಿ ಎಂದು ಕೇಳಿದ್ದರು. ಅದಕ್ಕೆ ನಾನೂ ಒಪ್ಪಿದೆ ಇದೀಗ ತಮಿಳಿನಲ್ಲಿ ’ವಂಶವೃಕ್ಷಂ’ ಕೃತಿ ಬಂದಿರುವುದು ಸಂತೋಷವನ್ನುಂಟು ಮಾಡಿದೆ ಎಂದರು.

ಈ ಹಿಂದೆ ಹಿಂದೂ ಕಾನೂನುಗಳನ್ನು ಅರ್ಥ ಮಾಡಿಕೊಳ್ಳಲು ಹಾಗೂ ನ್ಯಾಯಾಲಯದಲ್ಲಿ ವಾದ ಮತ್ತು ತೀರ್ಪು ನೀಡಲು ಮುಲ್ಲಾ ಆ್ಯಂಡ್ ಆಂಡ್ ಮುಲ್ಲಾ ಅವರ ಕೃತಿಯನ್ನು ವಕೀಲರು ಹಾಗೂ ನ್ಯಾಯಾಧೀಶರು ಅಧ್ಯಯನ ನಡೆಸುವ ಅಗತ್ಯವಿತ್ತು. ಆ ಕೃತಿ ಅಧ್ಯನದಿಂದ ಹೆಚ್ಚಿನ ಮಾಹಿತಿ ಸಿಗುತ್ತಿರಲಿಲ್ಲ. ವಂಶವೃಕ್ಷ ಕಾದಂಬರಿ ಓದಿದರೆ ಹಿಂದೂ ಕಾನೂನುಗಳು ಸರಿಯಾಗಿ ಅರ್ಥವಾಗುತ್ತವೆ ಎಂದು ಮುಖ್ಯ ನ್ಯಾಯಮೂರ್ತಿ ಗೋವಿಂದ ಭಟ್ ಬೆಂಗಳೂರಿನಲ್ಲಿ ನಡೆದ ಮಾಡಿಕೊಳ್ಳಲು ಪಿ.ವಿ.ಕಾಣೆ ಅವರ ’ಹಿಸ್ಟರಿ ಆಫ್ ಧರ್ಮಶಾಸ್ತ್ರ’ ಪುಸ್ತಕ ಓದಬೇಕು.೧೦ ಸಂಪುಟಗಳನ್ನು ಬರೆಯಲು ೪೦ ವರ್ಷ ತೆಗೆದುಕೊಂಡರು ಎಂದು ಹೇಳಿದರು.

ಅನುವಾದಕ ಕೆ.ನಲ್ಲ ತಂಬಿ ಮಾತನಾಡಿ, ಡಾ.ಎಸ್.ಎಲ್.ಭೈರಪ್ಪ ಅವರ ವಂಶವೃಕ್ಷ ಕೃತಿ ಬಿಡುಗಡೆಯಾದ ೬೪ ವರ್ಷದ ನಂತರ ತಮಿಳಿಗೆ ಅನುವಾದವಾಗಿದೆ. ವಂಶವೃಕ್ಷಂ ನನ್ನ ೫೧ನೇ ಅನುವಾದಿತ ಕೃತಿಯಾಗಿದೆ. ಈ ಕೃತಿ ಬಿಡುಗಡೆ ಕಾರ್ಯಕ್ರಮ ನಾನು ಓದಿದ ಮೈಸೂರಿನಲ್ಲಿಯೇ ನಡೆದಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಲೇಖಕ ಪಾವಣ್ಣನ್, ’ಝೀರೊ ಡಿಗ್ರಿ’ ಪ್ರಕಾಶನದ ರಾಮ್ ಜೀ ನರಸಿಂಹನ್ ಉಪಸ್ಥಿತರಿದ್ದರು.

Tags:
error: Content is protected !!