Mysore
25
scattered clouds

Social Media

ಬುಧವಾರ, 07 ಜನವರಿ 2026
Light
Dark

ಎಚ್‌ ಡಿ ಕೋಟೆ : ಕುತೂಹಲ ಮೂಡಿಸಲಿರುವ ನಿಖಿಲ್ ಕುಮಾರಸ್ವಾಮಿ, ಹರೀಶ್‌ಗೌಡರ ಭೇಟಿ

ಎಚ್ ಡಿ ಕೋಟೆ : ಜೆ ಡಿ ಎಸ್ ಪಕ್ಷದ ಕಚೇರಿಗೆ ನಿಖಿಲ್ ಹಾಗೂ ಹರೀಶ್ ಗೌಡ ರನ್ನುಅದ್ದೂರಿಯಾಗಿ ಬರಮಾಡಿಕೊಳ್ಳಲು ಪಟೇಲ್ ರಾಜೇಗೌಡರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಅ.27 ರಂದು ಎಚ್ ಡಿ ಕೋಟೆಗೆ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಪುತ್ರ ಹರೀಶ್ ಗೌಡ ಇಬ್ಬರು ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿನಡೆಯುವ ವಿಶ್ವಕರ್ಮ ಜಯಂತಿ ಕಾರ್ಯಕ್ರಮಕ್ಕೆ ಭೇಟಿ ನೀಡುತ್ತಾರೆ.

ನಂತರ ಕಾರ್ಯಕ್ರಮ ಮುಗಿಸಿ ಜೆ ಡಿ ಎಸ್ ಪಕ್ಷದ ಕಚೇರಿಗೆ ಭೇಟಿ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ನೆನ್ನೆಯಷ್ಟೇ ಪಕ್ಷದ ವರಿಷ್ಠರು ಜಿಲ್ಲೆಯ ಮೂರು ತಾಲ್ಲೂಕುಗಳ ಅಭ್ಯರ್ಥಿ ಪಟ್ಟಿ ಅಂತಿಮಗೊಳಿಸಿದ್ದಾರೆ. ಆದರೆ ಮತ್ತೊಮ್ಮೆ ಪಟ್ಟಣದ ಜೆ ಡಿ ಎಸ್ ಕಚೇರಿಗೆ ಭೇಟಿ ನೀಡಿ ಚುನಾವಣೆಯಲ್ಲಿ ಪಕ್ಷವನ್ನು ಬಲಪಡಿಸುವ ಬಗ್ಗೆ ಮತ್ತಷ್ಟು ಚರ್ಚೆ ನಡೆಸುತ್ತಾರೆ ಎಂದು ಪಟೇಲ್ ರಾಜೇಗೌಡ ತಿಳಿಸಿದ್ದಾರೆ. ಹೀಗಾಗಿ ಗೊಂದಲದಲ್ಲಿರುವ ಕ್ಷೇತ್ರದ ಜನತೆಗೆ ಪರಿಹಾರ ಸೂಚಿಸುವರಾ ಎಂಬುದನ್ನು ಕಾದು ನೋಡಬೇಕಾಗಿದೆ.
ಸಭೆಯಲ್ಲಿ ಗೋಪಾಲಸ್ವಾಮಿ, ಚಾ ನಂಜುಂಡ ಮೂರ್ತಿ, ಮಳಲಿ ಶಾಂತಕುಮಾರ, ನಯೀಮ್‌,  ಯುವಜನತಾದಳದ  ಅಧ್ಯಕ್ಚ ಚರಣ್‌, ನಾಗನಹಳ್ಳಿ ದಿನೇಶ್‌,  ಶಫೀವುಲ್ಲಾ, ಸುಧೀರ್ ,ರಾಜಾಚಾರಿ, ಶಿವಕುಮಾರ, ಸತೀಶ್ ಕದಂಬ, ವೇಣುಗೋಪಾಲ್, ಪಕ್ಷದ ಹಿರಿಯರು ಮಖಂಡರು ಭಾಗಿಯಾಗಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!