Mysore
15
overcast clouds

Social Media

ಗುರುವಾರ, 08 ಜನವರಿ 2026
Light
Dark

ಉಡುಪಿ ವಿಡಿಯೋ ಪ್ರಕರಣದಲ್ಲಿ ಇಸ್ಲಾಮಿಕ್ ಕೈವಾಡ ಇದೆ : ಪ್ರಮೋದ್ ಮುತಾಲಿಕ್

ಮೈಸೂರು : ಉಡುಪಿ ಕಾಲೇಜು ವಿಡಿಯೋ ಪ್ರಕರಣದ ಹಿಂದೆ ಇಸ್ಲಾಮಿಕ್ ಕೈವಾಡವಿದೆ. ಈ ಬಗ್ಗೆ ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಆರಂಭದಲ್ಲೇ ಪ್ರಕರಣ ದಾರಿ ತಪ್ಪಿಸುವ ಕೆಲಸ‌ ಆಗಿತ್ತು. ಗೃಹ ಸಚಿವರ ಹೇಳಿಕೆ ನಾವು ಒಪ್ಪುವುದಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ನಡೆಯದಿದ್ದರೆ ಸಿಎಂ ಯಾಕೆ ಅಲ್ಲಿಗೆ ಹೋದ್ರು. ಮಕ್ಕಳಿಂದ ಯಾಕೆ ತಪ್ಪೋಪ್ಪಿಗೆ ಪತ್ರ ಬರೆಸಿದ್ದಾರೆ. ಅಂದ ಮೇಲೆ ತಪ್ಪು ಮಾಡಿದ್ದಾರೆ ಎಂದು ಅಲ್ವಾ? ಎಂದ ಅವರು, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಆ ರೀತಿ ಹೇಳಬಾರದಿತ್ತು. ಎಷ್ಟು ವಿಡಿಯೋಗಳು ಆಫ್ಘಾನಿಸ್ಥಾನ, ಪಾಕಿಸ್ತಾನಕ್ಕೆ ಹೋಗಿದ್ದವೋ ಗೊತ್ತಿಲ್ಲ. ಎಲ್ಲವು ಸಮಗ್ರವಾಗಿ ತನಿಖೆಯಾಗಲಿ ಎಂದು ಹೇಳಿದರು.

ದೇಶದ ಮುಸ್ಲಿಮರು ಸೌಜನ್ಯದಿಂದ ನಡೆದುಕೊಳ್ಳಬೇಕು : ಜ್ಞಾನವಾಪಿ ಮಸೀದಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಯನ್ನು ಪ್ರಮೋದ್ ಮುತಾಲಿಕ್ ಸ್ವಾಗತಿಸಿದ್ದು, ಒಬ್ಬ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಸರಿಯಾಗಿ ಹೇಳಿದ್ದಾರೆ ಎಂದಿದ್ದಾರೆ.

ನೂರು ಕೋಟಿ ಭಾರತೀಯರು ಅವರ ಜೊತೆ ಇರುತ್ತೇವೆ. ದೇಶದ ಮುಸ್ಲಿಮರು ಸೌಜನ್ಯದಿಂದ ನಡೆದುಕೊಳ್ಳಬೇಕು. ಉದ್ದಟತನದ ವರ್ತನೆ ತೋರಬಾರದು. ಕಾಶಿ ವಿಶ್ವನಾಥ ದೇಗುಲವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು. ಡಿಸೆಂಬರ್ 6ರ ಘಟನೆ ಮರುಕಳಿಸುವಂತೆ ಮಾಡಬೇಡಿ. ಹಿಂದೂಗಳನ್ನು ಕೆರಳಿಸುವ ಕೆಲಸ ಮಾಡಬೇಡಿ ಎಂದು ತಿಳಿಸಿದರು.

ಮುಸ್ಲಿಂ ಸಂಘಟನೆಗಳು ಹದ್ದುಮೀರಿ ವರ್ತಿಸುತ್ತಿವೆ. ದೇಶದ ಮುಸಲ್ಮಾನರು ಬಾಬರ್ ನನ್ನು ಅನುಸರಿಸಿದ್ದು. ಆಕ್ರಮಣಕಾರಿ, ದೇಶದ್ರೋಹಿ ಔರಂಗಜೇಬ್ ನನ್ನು ಅಲ್ಲ. ಈಗಿನ ಮುಸ್ಲಿಮರು ಅವನನ್ನು ಏಕೆ ಅನುಸರಿಸುತ್ತೀರಿ. ಪ್ರಪಂಚದಲ್ಲಿ ಎಲ್ಲಾದರೂ ಜ್ಞಾನವಾಪಿ ಹೆಸರಿನ ಮಸೀದಿ ಇದೆಯಾ? ಅಲ್ಲಿನ ಬಸವ ಸಂಪೂರ್ಣ ಮಸೀದಿ ಕಡೆಗೆ ಮುಖ ಮಾಡಿದೆ. ಅದು ದೇವಸ್ಥಾನ ಎನ್ನಲು ಸಾಕಷ್ಟು ದಾಖಲೆಗಳಿವೆ. ಹೀಗಾಗಿ ಮುಸ್ಲಿಮರು ಸೌಜನ್ಯದಿಂದ ಬಿಟ್ಟು ಕೊಡಬೇಕು ಎಂದು ಹೇಳಿದರು.

ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸೌಜನ್ಯ ಪ್ರಕರಣದ ತನಿಖೆಯಾಗಲಿ : ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಆ ಭಾಗದಲ್ಲಿ ಅದೊಂದೆ ಅಲ್ಲ, ಇಪ್ಪತ್ತಕ್ಕೂ ಹೆಚ್ಚು ಅಂತಹ ಘಟನೆಗಳು ನಡೆದಿವೆ. ಸೌಜನ್ಯ ಪ್ರಕರಣದಲ್ಲಿ ಅಮಾಯಕನಿಗೆ ಹತ್ತು ವರ್ಷ ಶಿಕ್ಷೆ ಆಗಿದೆ. ಸೌಜನ್ಯ ಕುಟುಂಬಕ್ಕೆ ಅನ್ಯಾಯವಾಗಿದೆ. ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚಿಸಿ ಸಮಗ್ರವಾದ ತನಿಖೆ ಮಾಡಬೇಕು. ಸೌಜನ್ಯ ಪ್ರಕರಣ ಮರು ತನಿಖೆ ಆಗಲೇಬೇಕು ಎಂದು ಒತ್ತಾಯಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!