Mysore
34
few clouds

Social Media

ಗುರುವಾರ, 09 ಏಪ್ರಿಲ 2026
Light
Dark

ಮೈಸೂರು | ಗುಲಾಬಿ ಹಾಗೂ ಸಿಹಿ ನೀಡಿ ಸರ್ಕಾರಿ ಶಾಲೆಯ ಮಕ್ಕಳಿಗೆ ಆಹ್ವಾನ

government school

ಮೈಸೂರು : ಇಂದಿನಿಂದ ಶಾಲೆಗಳು ಆರಂಭವಾದ ಹಿನ್ನೆಲೆ ನಗರದಲ್ಲಿ ಮಕ್ಕಳಿಗೆ ಗುಲಾಬಿ ಹಾಗೂ ಸಿಹಿ ತಿನಿಸುಗಳನ್ನು ನೀಡಿ ಬರಮಾಡಿಕೊಳ್ಳಲಾಯಿತು.

ಮೈಸೂರಿನ ಅಗ್ರಹಾರದಲ್ಲಿರುವ ಅಕ್ಕನ ಬಳಗ ಸರ್ಕಾರಿ ಶಾಲೆಯಲ್ಲಿ ಇಂದು ಬೆಳಗ್ಗೆ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಮೈಸೂರಿನ ದುರ್ಗ ಫೌಂಡೇಶನ್ ನ ಸಿಬ್ಬಂದಿಯು ಗುಲಾಬಿ ಹೂ, ಸಿಹಿ ತಿನಿಸುಗಳನ್ನು ನೀಡಿ ಶಾಲೆಗೆ ಬರ ಮಾಡಿಕೊಂಡರು. ಇದೆ ವೇಳೆ ಮಕ್ಕಳಿಗೆ ಅಕ್ಷರಾಭ್ಯಾಷ ನಡೆಸಿ ಶುಭ ಕೋರಲಾಯಿತು.

ಈ ವೇಳೆ ದುರ್ಗ ಫೌಂಡೇಶನ್ ನ ಸಿಬ್ಬಂದಿ ಮಾತನಾಡಿ, ಕನ್ನಡ ಶಾಲೆಗಳು ಅಳಿವಿನಂಚಿನಲ್ಲಿದ್ದು ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕಿದೆ. ಶಾಲೆಯಲ್ಲಿ ಮಕ್ಕಳಿಗೆ ಖುಷಿಯ ವಾತಾವರಣ ನೀಡಿದರೆ ಸಂತಸದಿಂದ ಶಾಲೆಗೆ ಬರಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪೋಷಕರು ಇಂಗ್ಲಿಷ್ ಮಾಧ್ಯಮಗಳ ಮೊರೆ ಹೋಗಿದ್ದಾರೆ, ನಮ್ಮ ಭಾಷೆಯ ಮೇಲೆ ಪೋಷಕರುಗಳಿಗೆ ಕೀಳರಿಮೆ ಇದೆ, ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯ ಕನ್ನಡ ಶಾಲೆಗಳಿಗೆ ಸೇರಿಸಿ, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಬೇಕು ಎಂದು ತಿಳಿಸಿದರು

Tags:
error: Content is protected !!