ಮೈಸೂರು: ‘ದೇಶ ಸುತ್ತು ಕೋಶ ಓದು’ ಎಂಬ ನಾಣ್ನುಡಿಯಂತೆ, ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಪುಸ್ತಕದ ಓದು, ಬರಹ ಎಷ್ಟು ಮುಖ್ಯವೋ, ಕ್ಷೇತ್ರ ಪ್ರವಾಸ ಹಾಗೂ ಶೈಕ್ಷಣಿಕ ಪ್ರವಾಸಗಳೂ ಅಷ್ಟೇ ಮುಖ್ಯವಾಗಿರುತ್ತವೆ.
ಈ ನಿಟ್ಟಿನಲ್ಲಿ ಮೈಸೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಕೌಟಿಲ್ಯ ವಿದ್ಯಾಲಯ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಪ್ರವಾಸದ ಯೋಜನೆಯನ್ನು ರೂಪಿಸಿತ್ತು. ಪೂರಕವಾಗಿ ಪೋಷಕರು ಮತ್ತು ವಿದ್ಯಾರ್ಥಿಗಳ ಉತ್ತಮ ಪ್ರತಿಕ್ರಿಯೆ ಮತ್ತು ಸಹಕಾರದೊಂದಿಗೆ ‘ಸಿಂಗಾಪುರ’ ದೇಶಕ್ಕೆ ಕೌಟಿಲ್ಯ ವಿದ್ಯಾಲಯದಿಂದ ಶೈಕ್ಷಣಿಕ ಪ್ರವಾಸಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಾಗಿತ್ತು.
ಸಿಂಗಾಪುರ ದೇಶದ ಪ್ರಮುಖ ಸ್ಥಳಗಳಾದ, ಮರೀನಾ ಬೇ, ಗಾರ್ಡನ್ ಬೇ, ಯೂನಿವರ್ಸಲ್ ಸ್ಟುಡಿಯೋ, ಸಿಂಗಾಪುರ್ ನ ಶೈಕ್ಷಣಿಕ ವ್ಯವಸ್ಥೆಯ ಬಗೆಗೆ ಅಧ್ಯುಂನ ಮಾಡುವ ದೃಷ್ಟಿಯಿಂದ ಅಲ್ಲಿನ ಪ್ರತಿಷ್ಠಿತ ಶಾಲೆಗೆ ಭೇಟಿ ನೀಡಲಾಯಿತು.
ಭೇಟಿ ನೀಡಿದ್ದ ಸಂದರ್ಭದಲ್ಲಿ ವಿಶೇಷವಾಗಿ ಆ ಶಾಲೆಯ ಡೀನ್ ತಾವೇ ಸ್ವತಃ ವಿದ್ಯಾರ್ಥಿಗಳಿಗೆ ಅಲ್ಲಿನ ವಿಶೇಷ ಸಂಗೀತ ಪರಿಕರಗಳ ಬಗೆಗೆ ತಿಳಿಸಿಕೊಟ್ಟರು.
ಈ ಶೈಕ್ಷಣಿಕ ಪ್ರವಾಸವು ವಿದ್ಯಾರ್ಥಿಗಳಿಗೆ ತುಂಬು ಉತ್ಸಾಹವನ್ನು ತುಂಬುವುದರ ಜೊತೆಗೆ ಕಲಿಕೆಗೂ ಸಹ ಸಹಕಾರಿಯಾಯಿತು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.





