Mysore
17
clear sky

Social Media

ಗುರುವಾರ, 29 ಜನವರಿ 2026
Light
Dark

ರಾಮಮಂದಿರ ಉದ್ಘಾಟನೆ: ಮೈಸೂರಲ್ಲಿ ಶ್ರೀರಾಮನಿಗೆ ಸಪ್ತ ನದಿಗಳ ನೀರಿನ ಜಲಾಭೀಷೇಕ!

ಮೈಸೂರು: ಜನವರಿ 22ರಂದು ನಡೆಯಲಿರುವ ಶ್ರೀರಾಮನ ಭವ್ಯ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮೈಸೂರಿನ ವಾಸವಿ ಟ್ರಸ್ಟ್‌ ವತಿಯಿಂದ ನಾಳೆ (ಸೋಮವಾರ) ಮೈಸೂರಿನಲ್ಲಿ ಶ್ರೀರಾಮನ ಮೂರ್ತಿಗೆ ಸಪ್ತ ನದಿಗಳ ನೀರಿನಿಂದ ಜಲಾಭಿಷೇಕ ನೆರವೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಶ್ರೀರಾಮನ ಮೂರ್ತಿಯ ಅಭಿಷೇಕಕ್ಕೆ ಕಾವೇರಿ, ಕಪಿಲಾ, ನರ್ಮಾದಾ, ಸಿಂಧು, ಗಂಗಾ, ಸರಯೂ, ಯುಮುನಾ ಸಪ್ತ ನದಿಗಳ ನೀರನ್ನು ಸಂಗ್ರಹಿಸಿದ್ದು, ವಾಸವಿ ಟ್ರಸ್ಟ್ ಜಲಾಭಿಷೇಕಕ್ಕೆ‌ ಸಕಲ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಲಿದೆ. ಅದೇ ಸಮಯಕ್ಕೆ ಮೈಸೂರಿನ ದೇವಾಲಯದಲ್ಲೂ ಪ್ರಭು ಶ್ರೀರಾಮನಿಗೆ ಜಲಾಭೀಷೇಕ ನೆರವೇರಿಸಲಾಗುತ್ತದೆ. ಇದರೊಂದಿಗೆ ಪಂಚಾಮೃತ ಅಭಿಷೇಕ, 1,08,000 ತುಳಸಿ ದಳದಿಂದ ತೆಗೆದಿರುವ ರಸದಿಂದ ವಿಶೇಷ ಅಭಿಷೇಕವೂ ನೆರವೇರಲಿದೆ.

ಸೋಮವಾರ ಸಂಜೆ 6 ರಿಂದ ರಾತ್ರಿ 9 ಗಂಟೆವರೆಗೆ ಮೈಸೂರು ನಗರದ ಆಲಮ್ಮ ಛತ್ರದಲ್ಲಿ 102 ಬಗೆಯ ಆರತಿ ನೆರವೇರಿಸಲಾಗುತ್ತದೆ. ಅಯೋಧ್ಯೆ ಮತ್ತು ವಾರಣಾಸಿಯಿಂದ 102 ಬಗೆಯ ಆರತಿಗಳನ್ನು ತರಲಾಗಿದೆ. ಜೊತೆಗೆ ರಾಜ್ಯದಲ್ಲಿ ಬೆಳೆದಿರುವ ವಿಶೇಷ ಹೂಗಳಿಂದ ರಾಮನ ಅಲಂಕಾರವೂ ನಡೆಯಲಿದೆ ಎಂದು ವಾಸವಿ ಟ್ರಸ್ಟ್‌ ಸಿಬ್ಬಂದಿ ಖಾಸಗಿ ವಾಹಿನಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!