ಮೈಸೂರು : ನಿನ್ನೆ ( ಜುಲೈ 10 ) ಯೂತ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಮತ್ತು ಆಲ್ ಸ್ಟಾರ್ಸ್ ಬ್ಯಾಸ್ಕೆಟ್ ಬಾಲ್ ಆಶ್ರಯದಲ್ಲಿ ನಡೆದ ಕರಾಟೆ ಹಾಗೂ ಬ್ಯಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ನಗರದ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ವಿದ್ಯಾಸಂಸ್ಥೆಯ ಮಕ್ಕಳ ತಂಡಕ್ಕೆ ಪ್ರಥಮ ಬಹುಮಾನಗಳನ್ನು ಗಳಿಸಿದ್ದು ವಿಜೇತರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವ್ಯವಸ್ಥಾಪಕರಾದ ಡಾ. ಭವಾನಿ ಶಂಕರ್ ರವರು ಶುಭ ಹಾರೈಸಿದರು.
ಬಳಿಕ ಮಾತನಾಡಿದ ಭವಾನಿ ಶಂಕರ್ , ವಿದ್ಯಾರ್ಥಿಗಳು ಕ್ರೀಡಾಸಕ್ತಿ ಕಡೆ ಹೆಚ್ಚಿನ ಗಮನ ಹರಿಸಿದಾಗ ಮಾನಸಿಕ ಹಾಗೂ ದೈಹಿಕ ಚೈತನ್ಯ ಹೆಚ್ಚಾಗುತ್ತದೆ. ಇದರಿಂದ ಅವರ ವ್ಯಾಸಂಗಕ್ಕೂ ಹೊಸ ಹೊರುಪು ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಣ ಹಾಗೂ ಆರೋಗ್ಯವೇ ವಿದ್ಯಾರ್ಥಿಗಳ ಗೆಲುವಿನ ಮೆಟ್ಟಿಲು. ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನ ಬೆಳೆಸಿಕೊಂಡರೆ, ಜೀವನದ ಜಟಿಲ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಸಾಮಾರ್ಥ್ಯ ಹೆಚ್ಚುತ್ತದೆ ಎಂದರು
ಇದೇ ಸಂದರ್ಭದಲ್ಲಿ ಶಾಲೆಯ ಸಿಇಓ ತೇಜಸ್ ಶಂಕರ್, ಹಿರಿಯ ಪ್ರಾಚಾರ್ಯರಾದ ಗೋಪಾಲಸ್ವಾಮಿ ,ಪ್ರಾಚಾರ್ಯರಾದ ವಿಜಯ ನರಸಿಂಹಮ್ ಹಾಗೂ ಶಾಲೆಯ ಶಿಕ್ಷಕ ವೃಂದ ಹಾಜರಿದ್ದರು.