Mysore
27
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ರಾಜಕಾರಣ ಕಲಿತಿರಲಿಲ್ಲ, ಮುಂದೆ ಕಲಿಯುತ್ತೇನೆ; ಸಂಸದ ಪ್ರತಾಪ್‌ ಸಿಂಹ

ಮೈಸೂರು: ಇದುವರೆಗೆ ನಾನೂ ರಾಜಕಾರಣ ಕಲಿತಿರಲಿಲ್ಲ, ಆದರೆ, ಇನ್ನು ಮುಂದೆ ಖಂಡಿತಾ ರಾಜಕಾರಣ ಕಲಿಯುತ್ತೇನೆ. ಅಭಿವೃದ್ಧಿ ಕೆಲಸದ ಬಲದಿಂದಲೇ ಜನರ ಪ್ರೀತಿ, ವಿಶ್ವಾಸ ಗಳಿಸಿದೆ. ಇದೇ ಕಾರಣಕ್ಕೆ ಜನರು ನನ್ನನ್ನು ಎರಡು ಬಾರಿ ಸಂಸದನನ್ನಾಗಿ ಆಯ್ಕೆ ಮಾಡಿದ್ದರು. ಇವುಗಳ ಮಧ್ಯೆ ರಾಜಕಾರಣ ಇರುತ್ತದೆ ಎಂಬುದನ್ನು ಅರಿತುಕೊಳ್ಳುವಲ್ಲಿ ನಾನು ಸೋತಿದ್ದೇನೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಜಕಾರಣಿಯಾಗಿ ನಾನು ಸೋತಿದ್ದೇನೆ ಆದರೆ ಸಂಸದನಾಗಿ ಸಕ್ಸಸ್‌ ಆಗಿದ್ದೇನೆ ಎಂದಿದ್ದಾರೆ. ರಾಜಕಾರಣಿಯಾದವರು ಕೇವಲ ಚುನಾವಣೆ ಟಿಕೆಟ್‌ಗೋಸ್ಕರ ಹೋರಾಟ ಮಾಡಬಾರದು, ಅಭಿವೃದ್ಧಿ ಕೆಲಸಕ್ಕೂ ಹೋರಾಟ ಮಾಡಬೇಕು. ರಾಜಕಾರಣ ಅರಿತುಕೊಳ್ಳುವಲ್ಲಿ ಸೋತಿದ್ದೇನೆ, ಆದರೆ ಮುಂದೆ ರಾಜಕಾರಣ ಕಲಿಯುತ್ತೇನೆ ಎಂದರು.

ಎರಡು ಸಂಸದರಾಗಿದ್ದ ಪ್ರತಾಪ್‌ ಸಿಂಹ ಅವರಿಗೆ ಈ ಬಾರಿಯ ಲೋಕಸಭೆ ಚುನಾವಣೆಯ ಟಿಕೆಟ್‌ ಕೈತಪ್ಪಿರುವ ಹಿನ್ನಲೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಕಣಕ್ಕಿಳಿದ್ದಿದ್ದಾರೆ.

Tags: