Mysore
29
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ಸಮ್ಮುಖದಲ್ಲಿ ಯದುವೀರ್‌ ಮತ ಬೇಟೆ !

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಜಿ.ಟಿ.ದೇವೇಗೌಡರ ಸಮ್ಮುಖದಲ್ಲಿ ಬಿಜೆಪಿ-ಜಾ.ದಳ ಮೈತ್ರಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಿರುಸಿನ ಮತಾಂಚನೆ ನಡೆಸಿದರು.

ಜಾ.ದಳದ ಭದ್ರಕೋಟೆಯಾಗಿರುವ ಚಾಮುಂಡೇಶ್ವರಿಯಲ್ಲಿ  ಅಬ್ಬರದ ಪ್ರಚಾರ ನಡೆಸುವ ಮೂಲಕ ಸಂಚಲನ ಮೂಡಿಸಿದರು. ರಾಜಮನೆತನದ ಬಗ್ಗೆ ಅಪಾರ ಗೌರವವಿರುವ ಹಳ್ಳಿಗಳಲ್ಲಿ ಯದುವೀರ್ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿ ಆರತಿ ಬೆಳಗಿ, ಪುಷ್ಪವೃಷ್ಟಿ ಮೂಲಕ ಗೌರವ ಸೂಚಿಸಿದರು.

ಬೆಳಿಗ್ಗೆ ೭ರಿಂದ ಪ್ರಾರಂಭಗೊಂಡ ಮತಾಂಚನೆ ಸಾತಗಳ್ಳಿ, ಗಳಿಗರಹುಂಡಿ, ಹಂಚ್ಯಾ, ರಮ್ಮನಹಳ್ಳಿ, ಕಾಮನಕೆರೆ ಹುಂಡಿ, ಹಳೆ ಕೆಸರೆ, ಬೆಲವತ್ತ, ಕೆ.ಆರ್.ಮಿಲ್, ಸಿದ್ದಲಿಂಗಪುರ, ಕಳಸ್ತವಾಡಿ, ಲಕ್ಷ್ಮೀಪುರ, ನಾಗನಹಳ್ಳಿ, ಶ್ಯಾದನಹಳ್ಳಿ, ಮೈದನಹಳ್ಳಿ, ಮೇಗಳಾಪುರ, ಮಲ್ಲೇಗೌಡನಕೊಪ್ಪಲು, ಉಂಡುವಾಡಿ, ಚಿಕ್ಕನಹಳ್ಳಿ, ಆನಂದೂರು, ಕಲ್ಲೂರು ನಾಗನಹಳ್ಳಿ, ಕಲ್ಲೂರು, ಎಡಹಳ್ಳಿ, ರಾಮನಹಳ್ಳಿ, ಸಾಗರಕಟ್ಟೆ, ಹೊಸಕೋಟೆ, ಮಂಚೇಗೌಡನಹಳ್ಳಿ, ದಡದ ಕಲ್ಲಹಳ್ಳಿ, ಹನುಮಂತನಗರ, ಛತ್ರದಕೊಪ್ಪಲು, ಗುಂಗ್ರಾಲ್‌ಛತ್ರ, ಯಲಚನಹಳ್ಳಿ, ಈರಪ್ಪನಕೊಪ್ಪಲು, ಇಲವಾಲ ಗ್ರಾಮಗಳಲ್ಲಿ ಮತಾಂಚನೆ ನಡೆಸಿದರು. ಗ್ರಾಮದ ದೇವಾಲುಂಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.  ಗ್ರಾಮದಲ್ಲಿನ ಅಂಬೇಡ್ಕರ್, ಬಸವ, ಕೆಂಪೇಗೌಡ ಸೇರಿ ಹಲವು ಪ್ರತಿಮೆಗಳಿಗೆ ಮಾಲಾರ್ಪಣೆ ಸಹ ಮಾಡಿದರು.

ಮೈಸೂರು-ಕೊಡಗು ಲೋಕಸಭಾ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಕೆಲವರು ದಂತಗೋಪರದಲ್ಲಿ ಇರುವ ವ್ಯಕ್ತಿ, ಅರಮನೆ ವಾತಾವರಣದಲ್ಲಿ ಬೆಳೆದಿರುವ ವ್ಯಕ್ತಿ ಹೇಗೆ ಜನರ ಬಳಿಗೆ ಬಂದು ಸಂಕಷ್ಟಕ್ಕೆ ಪರಿಹರಿಸುತ್ತಾರೆ. ಹಳ್ಳಿಗೆ ಬರ್ತಾರಾ, ಗ್ರಾಮಕ್ಕೆ ಬರುತ್ತಾರಾ ಹೇಗೆ ಎಂಬಂತಹ ಎನೇನೋ ಪ್ರಶ್ನೆಗಳು? ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ನಾನು ಮಾಡುವ ಕೆಲಸ ಎಲ್ಲದಕ್ಕೂ ಉತ್ತರ ಕೊಡಲಿದೆ ಎಂದು ಭಾವಿಸಿದ್ದೇನೆ. ಇದಕ್ಕೊಂದು ಅವಕಾಶ ಕೊಡಿ ಎಂದು ಕೋರಿದರು.

ಇಂದು ಜಾ.ದಳ ಹಾಗೂ ಬಿಜೆಪಿ ಅಭಿವೃದ್ಧಿ ಭಾರತಕ್ಕೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮತ್ತೆ ಮಾಡಬೇಕೆಂದು ಮೈತ್ರಿ ಆಗಿದ್ದೇವೆ. ಅದಕ್ಕೆ ಹೆಚ್ಚಿನ ರೀತಿಯಲ್ಲಿ ಜನ ಬೆಂಬಲ ಸಿಗಬೇಕು. ಅದಕ್ಕೆ ನಿಮ್ಮ ಮತಗಳ ಮೂಲಕ ಎದುರಾಳಿಗಳಿಗೆ ಉತ್ತರ ಕೊಡುವ ಕೆಲಸವನ್ನು ಬಿಜೆಪಿಯ ಕಮಲದ ಗುರುತಿಗೆ ಮತ ಹಾಕುವ ಮೂಲಕ ಮಾಡಿ ಎಂದು ಹೇಳಿದರು.

ಮಾಜಿ ಸಚಿವ ಎಸ್.ಎ.ರಾಮದಾಸ್, ಬಿಜೆಪಿ ಮುಖಂಡ ಕವೀಶ್‌ಗೌಡ, ವಸ್ತುಪ್ರದರ್ಶನ ಪ್ರಾಧಿಕಾರದ ವಾಜಿ ಅಧ್ಯಕ್ಷ ಎ. ಹೇಮಂತ ಕುವಾರ್‌ಗೌಡ, ಅರುಣ್ ಕುವಾರ್‌ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ,  ಹೀಗಿರುವಾಗ ರಾಜವಂಶಸ್ಥರೇ ಅಭ್ಯರ್ಥಿಾಂಗಿ ನಿಮ್ಮ ಬಳಿಗೆ ಬಂದಿದ್ದಾರೆ. ನೀವೆಲ್ಲರೂ ಹೆಚ್ಚಿನ ಮತಗಳನ್ನು ಬಿಜೆಪಿ ಗುರುತಿಗೆ ನೀಡುವ ಮೂಲಕ ಈ ಮೈತ್ರಿುಂನ್ನು ಗೆಲ್ಲಿಸಬೇಕು.ವಾತ್ರವಲ್ಲದೆ, ಸಣ್ಣಪುಟ್ಟ ವೈಮನಸ್ಸನ್ನು ತೊರೆದು ಅಭ್ಯರ್ಥಿ ಗೆಲುವಿಗೆ ಮತ ಹಾಕಿ ಚಾಮುಂಡೇಶ್ವರಿುಂಲ್ಲಿ ಅತಿಹೆಚ್ಚು ಮತ ನೀಡುವಂತೆ ಹೇಳಿದರು.

Tags:
error: Content is protected !!