ಮೈಸೂರು: ತಾಲ್ಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿ ಅನುಗನಹಳ್ಳಿಯ ತೋಟದಲ್ಲಿ ರೌಡಿ ಶೀಟರ್ ಸೂರ್ಯ ಬರ್ಭರ ಹತ್ಯೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೃತನನನ್ನು ರೌಡಿ ಶೀಟರ್ ಅವರ ಹೆಸರು ದೊರೆಸ್ವಾಮಿ ಅಲಿಯಾಸ್ ಸೂರ್ಯ ಎಂದು ಗುರುತಿಸಲಾಗಿದೆ. ಈತನನ್ನು ಮಾರಕಾಸ್ತ್ರದಿಂದ ನಾಲ್ಕಾರು ಕಡೆ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಕೃತ್ಯ ಮಾರ್ಚ್. 12 ರ ರಾತ್ರಿ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಸೂರ್ಯನ ವಿರುದ್ಧ 4-5 ಪ್ರಕರಣಗಳು ಇದ್ದು, ಆತ ಎಂಓಬಿಯಲ್ಲಿ ಸೇರ್ಪಡೆಯಾಗಿದ್ದನು. ಅಲ್ಲದೇ 6 ತಿಂಗಳ ಹಿಂದೆ ಅವನ ಪತ್ನಿ ದೀಪಿಕಾ ಈತನಿಂದ ದೂರವಾಗಿದ್ದಳು. ಕೆಲವು ದಿನಗಳಿಂದ ಬೇರೆಯೊಂದು ಯುವತಿಯೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ ಎನ್ನಲಾಗುತ್ತಿದೆ. ಅಲ್ಲದೇ ಕೃತ್ಯ ನಡೆದ ಸ್ಥಳದಲ್ಲಿ ಹೋಟೆಲ್‌ನಿಂದ ತೆಗೆದುಕೊಂಡು ಬಂದ ಪದಾರ್ಥಗಳು ಹಾಗೂ ಮದ್ಯಪಾನ ಮಾಡಿರುವ ಸುಳಿವುಗಳು ಸಿಕ್ಕಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ವಾನ ದಳ ಹಾಗೂ ಬೆರಳುಮುದ್ರೆ ಘಟಕದೊಂದಿಗೆ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಕೊಲೆಯ ಅಪರಾಧಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಶ್ವೇತಾ ಎಂಬ ಯುವತಿಯೇ ತನ್ನ ಪತಿಯನ್ನು ಕೊಂದಿದ್ದಾಳೆ: ಪತ್ನಿ ದೀಪಿಕಾ ಆರೋಪ
ಇನ್ನು ರೌಡ ಶೀಟರ್ ಸೂರ್ಯನ ಪತ್ನಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನನ್ನ ಗಂಡನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಶ್ವೇತಾ ಎಂಬ ಯುವತಿಯೇ ತನ್ನ ಪತಿಯನ್ನು ಸಾಯಿಸಿದ್ದಾಳೆ ಎಂದಿದ್ದಾರೆ.
ಶ್ವೇತಾ ಎಂಬಾಕೆ ಖಾಸಗಿ ವಾಹಿನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ನನ್ನ ಗಂಡನಿಗೆ ಇನ್ಸ್ಟಾಗ್ರಾಮ್ ಮೂಲಕ ಸೂರ್ಯನಿಗೆ ಹತ್ತಿರವಾಗಿದ್ದಳಂತೆ. ಶ್ವೇತಾಳೊಂದಿಗೆ ಬದುಕಲಾರಂಭಿಸಿದ್ದ ಸೂರ್ಯ ಹೆಂಡತಿ-ಮಕ್ಕಳು ಹಾಗೂ ಹೆತ್ತ ತಾಯಿಯನ್ನೂ ಮನೆಯಿಂದ ಹೊರಹಾಕಿದ್ದರು. ಅಲ್ಲದೇ ನನ್ನ ಗಂಡ ಸಾಯುವ ಹಿಂದಿನ ರಾತ್ರಿ ಸೂರ್ಯ ಮತ್ತು ಶ್ವೇತಾ ಜೊತೆಗಿದ್ದರೆಂದು ಅವರು ಹೇಳುತ್ತಾರೆ.





