ತಿ. ನರಸೀಪುರ: ಪತ್ನಿಯ ಜತೆ ಅಕ್ರಮ ಸಂಬಂಧದ ಹಿನ್ನೆಲೆ ವ್ಯಕ್ತಿಯೊಬ್ಬ ಪತ್ನಿಯ ಪ್ರಿಯಕರನ್ನು ನೀರಿಗೆ ತಳ್ಳಿ ಕೊಲೆ ಮಾಡಿರುವ ಪ್ರಕರಣವೊಂದು ತಿರಮಕೂಡಲು ಕಾವೇರಿ ನದಿ ಸಮೀಪದ ಬಳಿ ಬುಧವಾರ ರಾತ್ರಿ ನಡೆದಿದೆ.
ಕೊಳ್ಳೇಗಾಲ ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದ ಚಂದ್ರು ಎಂಬಾತನೇ ಕೊಲೆಯಾದ ವ್ಯಕ್ತಿ. ಯಳಂದೂರು ತಾಲ್ಲೂಕಿನ ದುಗ್ಗಟ್ಟಿ ಗ್ರಾಮದ ಕೊಟ್ಟೂರಪ್ಪ ಕೊಲೆಗೈದ ವ್ಯಕ್ತಿ.
ಕೊಟ್ಟೂರಪ್ಪನ ಪತ್ನಿ, ಕಾಮಾಕ್ಷಿಯೊಂದಿಗೆ ದೊಡ್ಡಿಂದುವಾಡಿ ಗ್ರಾಮದ ಚಂದ್ರು ಅಕ್ರಮ ಸಂಬಂಧ ಹೊಂದಿದ್ದ. ಕಳೆದ 6 ದಿನಗಳ ಹಿಂದೆ ಕಾಮಾಕ್ಷಿ ಚಂದ್ರು ಜತೆ ತಿ. ನರಸೀಪುರದಲ್ಲಿ ಓಡಾಡುತ್ತಿದ್ದು ಪತಿಗೆ ತಿಳಿದಿದೆ. ಬಳಿಕ ತಿ.ನರಸೀಪುರದ ತಿರುಮಕೂಡಲಿನ ಚೌಡೇಶ್ವರಿ ದೇವಾಲಯದ ಎದುರಿನ ಕಾವೇರಿ ನದಿಗೆ ಹೋಗುವ ಮೆಟ್ಟಿಲುಗಳ ಬಳಿ ಕೊಟ್ಟೂರಪ್ಪ -ಚಂದ್ರ ನಡುವೆ ಗಲಾಟೆಯಾಗಿದೆ. ಈ ವೇಳೆ ಕೊಟ್ಟೂರಪ್ಪ ಚಂದ್ರುವಿಗೆ ಹೊಡೆದು ಒದ್ದು ನೀರಿಗೆ ತಳ್ಳಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ತಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





