Mysore
16
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಪಕ್ಷ ಸೂಚನೆ ನೀಡಿದರೆ ಮಂಡ್ಯ ಪ್ರಚಾರದಲ್ಲಿ ಭಾಗಿ : ಸುಮಲತಾ ಅಂಬರೀಷ್‌

ಮೈಸೂರು : ಪಕ್ಷ ಯಾವಾಗ ಪ್ಲಾನ್‌ ಮಾಡಿ ಹೇಳುತ್ತಾರೋ ಆಗ ಮಂಡ್ಯ ಪ್ರಚಾರಕ್ಕೆ ಹೋಗುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಷ್‌ ಹೇಳಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ಇನ್ನೂ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷ ಎಲ್ಲಿ ಹೋಗಲು ಸೂಚನೆ ನೀಡುತ್ತದೆ ಅಲ್ಲಿಗೆ ಹೋಗಿ ಪ್ರಚಾರ ಮಾಡುತ್ತಿದ್ದೇನೆ. ಮಂಡ್ಯ ಕ್ಷೇತ್ರದ ಪ್ರಚಾರದ ಕುರಿತಾಗಿ ಪಕ್ಷ ಹೇಳಿದರೆ ಹೋಗಿ ಪ್ರಚಾರ ಕಾರ್ಯ ಮಾಡುತ್ತೇನೆ ಎಂದರು.

ಗೆದ್ದ ಕ್ಷೇತ್ರ ಬಿಟ್ಟುಕೊಟ್ಟಿದ್ದಕ್ಕಿಂತ ಬೆಂಬಲ ಬೇಕಾ : ಕುಮಾರಸ್ವಾಮಿ ಅವರಿಗೆ ಬೆಂಬಲದ ಬಗ್ಗೆ ಮಾತನಾಡಿದ ಅವರು, ಹೆಚ್‌.ಡಿ.ಕುಮಾರಸ್ವಾಮಿ ನನ್ನ ಮನೆಗೆ ಬಂದಿ ಬೆಂಬಲ ನೀಡುವಂತೆ ಕೇಳಿದ ಬಳಿಕ ನಾನು ಗೆದ್ದಂತ ಕ್ಷೇತ್ರವನ್ನು ಬಿಟ್ಟು ಬಿಜೆಪಿಗೆ ಸೇರುತ್ತಿದ್ದೇನೆ ಎಂದು ಹೇಳಿದ್ದೆ. ಇದಕ್ಕಿಂತ ದೊಟ್ಟ ಬೆಂಬಲ ಬೇಕಾ?

ಒಂದು ವೇಳೆ ಹಠಕ್ಕೆ ಬಿದ್ದು ಚುನಾವಣೆಗೆ ಪಕ್ಷೇತರವಾಗಿ ನಾನೇ ನಿಂತಿದ್ದರೆ, ಹೆಚ್ಚುಕಮ್ಮಿ ಅಗುತ್ತಿತ್ತು. ಅದನ್ನು ಮಾಡಿಲ್ಲ ಅಂದಮೇಲೆ ಪ್ರಚಾರಕ್ಕಿಂತ ಹೆಚ್ಚಿನ ಬೆಂಬಲ ನೀಡಿದಂತೆ ಅಲ್ಲವೇ? ಎಂದು ಪ್ರಶ್ನಿಸಿದರು.

ನನ್ನ ಪ್ರಚಾರಕ್ಕೆ ದರ್ಶನನ್ನು ಕರೆದಿರಲಿಲ್ಲ! : ಇನ್ನು ನಟ ದರ್ಶನ್‌ ಮಳವಳ್ಳಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಮಂಡ್ಯದಲ್ಲಿ ಪ್ರಚಾರ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು,  ಕಳೆದ ಲೋಕಸಭಾ ಚುನಾವಣೆ ವೇಳೆ ದರ್ಶನ್‌ ಅವರನ್ನು ನಾನು ಪ್ರಚಾರಕ್ಕೆ ಕರೆದಿಲ್ಲ. ಚುನಾವಣೆಯ ಸಂದರ್ಭದಲ್ಲಿ ದರ್ಶನ್‌ ಅವರೇ ಬಂದು ನಿಮ್ಮ ಪರವಾಗಿ ನಿಲ್ಲುತ್ತೇನೆ ಎಂದು ಹೇಳಿ ಬಂದಿದ್ದರು.

ಹೀಗಾಗಿ ಪ್ರಚಾರಕ್ಕೆ ಸಂಬಂಧಪಟ್ಟಂತೆ ದರ್ಶನ್‌ ಅವರಿಗೆ ಯಾವುದೇ ಮಾರ್ಗದರ್ಶನ ನಾನು ನೀಡುವುದಿಲ್ಲ ಹಾಗೂ ನೀಡಿಲ್ಲ. ಅದು ನನಗೆ ಸಂಬಂಧವೇ ಇಲ್ಲ. ದರ್ಶನ್‌ ಯಾವುದೇ ಒಂದು ಪಕ್ಷದ ಪರ ನಿಂತಿಲ್ಲ. ಅವರು ವ್ಯಕ್ತಿಪರ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಅವರಿಗೆ ಬೇಕಾದವರಿಗೆ ಪ್ರಚಾರ ಮಾಡುವ ಹಕ್ಕು ಅವರಿಗೆ ಇದೆ ಎಂದು ಸುಮಲತಾ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನಾಗೇಂದ್ರ, ಶಾಸಕ ಶ್ರೀವತ್ಸ, ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:
error: Content is protected !!