ಮೈಸೂರು: ಇತಿಹಾಸವಿರುವ ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೆ ಹೋರಾಟ ಮಾಡುತ್ತೇವೆ ಶತಸಿದ್ದ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದರು.
ಇಂದು (ಡಿ.2) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆಗೆ ಈಗಾಗಲೇ ಪ್ರಿನ್ಸೆಸ್ ಎಂಬ ಹೆಸರಿದೆ. ಆ ಹೆಸರನ್ನು ತೆಗೆದು ʻಸಿದ್ದರಾಮಯ್ಯ ಆರೋಗ್ಯ ಮಾರ್ಗʼ ಎಂದು ಹೆಸರಿಡಲು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡರೆ ಹೋರಾಟ ಶತಸಿದ್ದ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ಹೆಸರು ಇಡುವುದು ಬೇಡ ಎನ್ನುತ್ತಿಲ್ಲ. ಬೇಕಾದ್ರೆ ಅವರ ಹೆಸರನ್ನು ಬೇರೆ ರಸ್ತೆಗೆ ಇಡಿ ಆದರೆ ಆ ರಸ್ತೆಗೆ ಬೇಡ ಎಂದು ಹೇಳಿದರು.





