Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಪ್ರತಾಪ್‌ ಸಿಂಹರ ಬಳಿ ಆ ಒಂದು ವಿಷಯ ಕಲಿಯುತ್ತೇನೆ: ಸಿಂಹ ಕಾಲೆಳೆದ ಲಕ್ಷ್ಮಣ್‌

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಎಂ. ಲಕ್ಷ್ಮಣ್‌ ಅವರು, ಚುನಾವಣಾ ಪ್ರಚಾರದಲ್ಲಿ ಹಗಳಿರುಳು ದುಡಿದ ಪಕ್ಷದ ಮುಖಂಡರು, ಕಾರ್ಯಕರ್ತರು, ಎಲ್ಲಾ ಸಂಘಟನೆಗಳು ಸೇರಿದಂತೆ ತಮಗಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ತಮಗೆ ಮತದಾನ ನಡೆಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಹಾಗೂ ಈ ಬಾರಿ ಶೇ 80 ರಷ್ಟು ಮಹಿಳೆಯರ ಮತಗಳು ತಮಗೆ ಬಂದಿರುವುದಾಗಿ ಅವರು ತಿಳಿಸಿದರು.

ಒಂದು ವೇಳೆ ಈ ಚುನಾವಣೆಯಲ್ಲಿ ತಾವು ಗೆದ್ದಿದ್ದೇ ಆದರೇ, ಮೈಸೂರು ಹಾಗೂ ಕೊಡಗಿನಲ್ಲಿ ಒಂದೊಂದು ಕಚೇರಿ ಸ್ಥಾಪಿಸಿ, 15 ದಿನ ಮೈಸೂರು ಮತ್ತು 15 ದಿನ ಕೊಡಗಿನಲ್ಲಿ ವಾಸ್ತವ್ಯ ಹೂಡಿ ಜನರಿಗೆ ಸ್ಪಂದಿಸುವುತ್ತೇನೆ. ಮತ್ತು ತಮ್ಮ ಕ್ಷೇತ್ರದಲ್ಲಿ ಯಾವುದೇ ಪಕ್ಷದ ಶಾಸಕರಾಗಿದ್ದರೂ ಅವರೊಂದಿಗೆ ಸಮನ್ವಯತೆ ಸಾಧಿಸಿ ಕೆಲಸ ಮಾಡಿಕೊಂಡು ಹೋಗಲಾಗುವುದು ಎಂದು ಅವರು ಹೇಳಿದರು.

ಇನ್ನು ತಮ್ಮ ಗೋಷ್ಠಯ ವೇಳೆ ಸಂಸದ ಪ್ರತಾಪ್‌ ಸಿಂಹ ಅವರನ್ನು ನೆನೆದಿರುವ ಅವರು, ಕಳೆದ 20-25 ದಿನಗಳಿಂದ ಪ್ರತಾಪ್‌ ಸಿಂಹ ಪತ್ತೆಯಿಲ್ಲ. ಎಲ್ಲಿದ್ದಾರೋ ಗೊತ್ತಿಲ್ಲ, ಆದರೆ ಅವರನ್ನು ಭೇಟಿಯಾದರೇ ಸತ್ಯದ ನೆತ್ತಯ ಮೇಲೆ ಒಡೆದು ಸುಳ್ಳು ಹೇಳುವುದು ಹೇಗೆ ಎಂಬುದನ್ನು ಕಲಿಯುತ್ತೇನೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

 

Tags: