Mysore
25
clear sky

Social Media

ಭಾನುವಾರ, 28 ಡಿಸೆಂಬರ್ 2025
Light
Dark

ನಾನೆ ಅರಮನೆಯಿಂದ ಆಚೆ ಬರುತ್ತೇನೆ : ಯದುವೀರ್‌ ಒಡೆಯರ್‌

ಮೈಸೂರು : ಜನರು ಅರಮನೆಗೆ ಬರುವುದು ಬೇಡ ನಾನೆ ಅರಮನೆಯಿಂದ ಆಚೆ ಬರುತ್ತೇನೆ ಎಂದು ಮೈಸೂರು-ಕೊಡಗು ಬಿಜೆಪಿ ಲೋಕಸಭಾ ಅಭ್ಯರ್ಥಿ ಯದುವೀರ್‌ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಮಾಧ್ಯಮ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರು ತಮ್ಮ ಸಮಸ್ಯೆಯನ್ನು ಹಿಡಿದು ಅರಮನೆಗೆ ಬರುವ ಅವಶ್ಯಕತೆ ಇಲ್ಲ. ನಾನೇ ಅರಮನೆಯಿಂದ ಆಚೆ ಬರುತ್ತೇನೆ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ತಿಳಿಸಿದರು.

ನಾನು ಎಂದಿಗೂ ರಾಜನೆಂದು ಹೇಳಿಕೊಂಡಿಲ್ಲ. ಆ ಪದವಿ ನಮ್ಮ ಪರಂಪರೆಗೆ ಸಂಬಂಧಿಸಿದಂತೆ, ಅರಮನೆಯಲ್ಲಿ ನಡೆಯುವ ಸಂಪ್ರದಾಯಗಳಲ್ಲಿ ಭಾಗವಹಿಸುವ ಸಂದರ್ಭಕ್ಕೆ ಮಾತ್ರ ಸೀಮಿತ ಎಂದರು.

ಅದನ್ನು ಹೊರತುಪಡಿಸಿ, ನಾನು ಪಕ್ಷದ ಕಾರ್ಯಕರ್ತನಾಗಿ, ವಕ್ತಾರನಾಗಿ, ಮುಖಂಡನಾಗಿ, ಒಬ್ಬ ಸಂಸದ ಏನೆಲ್ಲಾ ಕೆಲಸ ಮಾಡುತ್ತಾರೋ ನಾನು ಅದನ್ನೇ ಮಾಡುತ್ತೇನೆ ಎಂದು ತಿಳಿಸಿದರು.

Tags:
error: Content is protected !!