ಮೈಸೂರು : ನಾನು ಮೈಸೂರು, ಕೊಡಗು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಎಚ್ ವಿಶ್ವನಾಥ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮೈಸೂರು-ಕೊಡಗು ‘ಕೈ’ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ನಾನು ಟೆಕ್ನಿಕಲಿ ಬಿಜೆಪಿಯಲ್ಲಿದ್ದೇನೆ. ನನಗೆ ಟಿಕೆಟ್ ನೀಡಿದರೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧೆ ಮಾಡುವೆ.
ಸಿದ್ದರಾಮಯ್ಯ ನೀವು ಬಿಜೆಪಿಯಲ್ಲಿ ಇದ್ದೀರಾ ಹೇಗೆ ಅಂತಾ ಕೇಳಿದರು. ಅದಕ್ಕೆ ನಾನು ಎಲ್ಲವನ್ನೂ ವಿವರಿಸಿದ್ದೇನೆ ಎಂದು ಹೇಳಿದ್ದರು.
ಮುದ್ದು ಹನುಮೇಗೌಡರಿಗೂ ಟಿಕೆಟ್ ನೀಡಲಾಗುತ್ತಿದೆ. ಅದೇ ರೀತಿ ನನಗೂ ನೀಡಬಹುದು ಅಂತಾ ತಿಳಿಸಿದ್ದೇನೆ. ಸಿಎಂ ಸಿದ್ದರಾಮಯ್ಯ ನೋಡೋಣ ಅಂತಾ ಹೇಳಿದ್ದಾರೆ. ಒಂದು ವೇಳೆ ಟಿಕೆಟ್ ನೀಡಿದರೆ ಗೆಲ್ಲುವ ವಿಶ್ವಾಸ ಇದೆ ಎಂದಿದ್ದಾರೆ.
ನಾನು ಇದೇ ಕ್ಷೇತ್ರದಲ್ಲಿ ಸಂಸದನಾಗಿದ್ದೇ. ಈ ವೇಳೆ ಕೊಡಗು ಮೈಸೂರಿನಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹಿಂದೆ ಸಚಿವನಾಗಿದ್ದಾಗ ಬಿಸಿಯೂಟ ಯಶಸ್ವಿನಿ ಯೋಜನೆ ಜಾರಿ ಮಾಡಿದ್ದೇನೆ. ಚುನಾವಣೆಗೆ ಹಣ ಜಾತಿಯಿಂದ ಮಾತ್ರವಲ್ಲ ಅನುಭವದ ಅವಶ್ಯಕತೆ ಇದೆ ಎಂದರು.

ಸಂಸದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ಕೈತಪ್ಪುವ ವಿಚಾರವಾಗಿ ಮಾತನಾಡಿದ ಅವರು, ಅಭಿವೃದ್ಧಿ ಕೆಲಸಗಳಿಗಿಂತ ನಡವಳಿಕೆಗಳು ಮುಖ್ಯವಾಗುತ್ತೆ. ಪ್ರತಾಪ್ ಅವರ ಈ ಪರಿಸ್ಥಿತಿಗೆ ಅವರ ನಡವಳಿಕೆ ಕಾರಣ. ಪ್ರತಾಪ್ ಸಿಂಹ ನಡೆದುಕೊಂಡ ರೀತಿಯಿಂದ ಹೀಗಾಗಿದೆ ಎಂದು ಹೇಳಿದ್ದಾರೆ