ಮೈಸೂರು: ರಾಜ್ಯದಲ್ಲಿ ಸಚಿವ ಸಂಪುಟಕ್ಕೆ ಸರ್ಜರಿ ಬಗ್ಗೆ ಚರ್ಚೆಯಾಗುತ್ತಿದೆ. ಈ ನಡುವೆ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಪತ್ರಕರ್ತ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನ ನನ್ನನ್ನು ಆರು ಭಾರಿ ಆಯ್ಕೆಮಾಡಿದ್ದಾರೆ. ನಮ್ಮ ಕುಟುಂಬಕ್ಕೆ ಸುಧೀರ್ಫ ಚುನಾವಣಾ ರಾಜಕೀಯ ಇತಿಹಾಸವಿದೆ. ಕಳೆದ ಬಾರಿಯೇ ಸಚಿವ ಸ್ಥಾನ ಸಿಗುವ ಭರವಸೆ ಇತ್ತು. ಆದರೆ, ಕಳೆದ ಬಾರಿ ಯಾವ ಕಾರಣಕ್ಕೆ ಕೈತಪ್ಪಿತ್ತು ಗೊತ್ತಿಲ್ಲ ಎಂದು ತಿಳಿಸಿದರು.
ಬಹುಮತದ ಸರ್ಕಾರ ಬಂದಾಗ ಸಚಿವ ಸ್ಥಾನ ಸಿಗುವುದು ಕಷ್ಟವಾಗುತ್ತದೆ. ಲೋಕಸಭಾ ಚುನಾವಣೆ ಸಮಯದಿಂದಲೂ ಸಚಿವ ಸ್ಥಾನ ವಿಸ್ತರಣೆ ಬಗ್ಗೆ ಚರ್ಚೆಯಾಗುತ್ತಿದೆ. ನಾನು ಸಚಿವ ಸ್ಥಾನ ಕೊಡಿ ಎಂದು ಯಾರ ಬಳಿ ಕೇಳಿಲ್ಲ. ಪಕ್ಷದ ವರಿಷ್ಠರ ಮೇಲೆ ನನಗೆ ನಂಬಿಕೆ ಇದ. ಸಚಿವ ಸ್ಥಾನದ ಪಟ್ಟಿಯಲ್ಲಿ ಕಳೆದ ಬಾರಿಯು ನನ್ನ ಹೆಸರಿತ್ತು. ಈ ಬಾರಿಯು ನನ್ನ ಹೆಸರಿದೆ ಎಂದು ಹೇಳಿದರು.