Mysore
19
clear sky

Social Media

ಶನಿವಾರ, 07 ಮಾರ್ಚ್ 2026
Light
Dark

ಹುಣಸೂರು| ಗೂಡ್ಸ್‌ ವಾಹನ ಪಲ್ಟಿ: 13 ಕೂಲಿ ಕಾರ್ಮಿಕರಿಗೆ ಗಾಯ

ಹುಣಸೂರು: ಗೂಡ್ಸ್‌ ವಾಹನ ಪಲ್ಟಿಯಾಗಿ 13 ಕೂಲಿ ಕಾರ್ಮಿಕರಿಗೆ ಗಾಯವಾಗಿರುವ ಘಟನೆ ಹುಣುಸೂರು ತಾಲೂಕಿನ ಗದ್ದಿಗೆ ರಸ್ತೆಯ ಸಂಜೀವಿನಿ ನಗರದ ಬಳಿ ನಡೆದಿದೆ.

ಹುಣಸೂರು ತಾಲೂಕಿನ ಸಿಬಿಟಿ ಕಾಲೋನಿಯ ಚಿಕ್ಕಣ್ಣ, ಪಾರ್ಥ, ಕುಮುದ, ಮಂಜುಳ, ಪಾರ್ವತಿ, ಚಿನ್ನಮುತ್ತಮ್ಮ, ತರಿಕಲ್‌ನ ವಳ್ಳಿಯಮ್ಮ, ರಾಣಿ, ಮಹದೇವಮ್ಮ, ಮಂಗಳ ಗಾಯಾಳುಗಳಾಗಿದ್ದಾರೆ.

ಗಾಯಾಳುಗಳಲ್ಲಿ ಐದು ಮಂದಿಗೆ ಹುಣಸೂರಿನ ಕಾವೇರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರನ್ನು ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುಣಸೂರು ತಾಲೂಕಿನ ವಿವಿಧ ಗ್ರಾಮಗಳಿಂದ ಹೆಚ್‌ಡಿ ಕೋಟೆ ತಾಲೂಕು ಹ್ಯಾಂಡ್‌ ಪೋಸ್ಟ್‌ಗೆ ತೆರಳುವ ಸಮಯ ಈ ಅಪಘಾತ ಸಂಭವಿಸಿದೆ. ಈ ಸಂಬಂಧ ಬಿಳಿಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Tags:
error: Content is protected !!