Mysore
20
overcast clouds
Light
Dark

ಹುಣಸೂರು: ಆರ್‌ಟಿಓ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಮೈಸೂರು: ಹುಣಸೂರಿನ ಪ್ರಾದೇಶಿಕ ಸಾರಿಗೆ ಕಚೇರಿ(ಆರ್‌ಟಿಓ) ಮೇಲೆ ಇಂದು(ಜೂ.12) ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಕಚೇರಿ ಆವರಣದಲ್ಲಿದ್ದ ಬ್ರೋಕರ್‌ಗಳು ಪರಾರಿಯಾಗಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಕಚೇರಿಯಲ್ಲಿ ಅನಧಿಕೃತವಾಗಿ ಸಾರ್ವಜನಿಕರ ದಾಖಲಾತಿ ಮಾಡಿಕೊಳ್ಳುತ್ತಿದ್ದ ಲ್ಯಾಪ್‌ಟಾಪ್‌, ಸ್ಕ್ಯಾನರ್‌, 1 ಸ್ಯಾಂಟ್ರೋ ಕಾರು, 3 ಓಮಿನಿ ವ್ಯಾನ್‌ಗಳು ಸೇರಿದಂತೆ ಮತ್ತಿತರ ದಾಖಲಾತಿಗಳನ್ನು ವಶಕ್ಕೆ ಪಡೆದಿದ್ದಾರೆ.

ದಾಳಿ ವೇಳೆ ಆರ್‌ಟಿಓ ಕಚೇರಿಯಲ್ಲಿರಬೇಕಾದ ಅಧಿಕೃತ ಸರ್ಕಾರಿ ದಾಖಲಾತಿಗಳು ಬ್ರೋಕರ್‌ಗಳ ಕಾರಿನಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿದ್ದು, ಇದು ಆರ್‌ಟಿಓ ಕಚೇರಿಯಲ್ಲಿ ನಡೆಯುತ್ತಿದ್ದ ಭ್ರಷ್ಟಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಭ್ರಷ್ಟಚಾರ ಮತ್ತು ಬ್ರೋಕರ್‌ಗಳ ಹಾವಳಿಯಿಂದ ಬೇಸತ್ತಿದ್ದ ಆರ್‌ಟಿಓ ಅಧಿಕಾರಿಗಳೇ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾಗಿದೆ.

ಹುಣಸೂರು ಆರ್‌ಟಿಓ ಕಚೇರಿಯಲ್ಲಿ ಭ್ರಷ್ಟಾಚಾರ ನಿರಂತರವಾಗಿದ್ದು, ಈ ಭ್ರಷ್ಟಚಾರಕ್ಕೆ ಆರ್‌ಟಿಓ ಅಧಿಕಾರಿಗಳೇ ಬೇಸತ್ತಿದ್ದಾರೆ. ಅಧಿಕಾರಿಗಳಿಗೆ ಈ ಸ್ಥಿತಿಯಾದರೆ ಇನ್ನೂ ಸಾರ್ವಜನಿಕರು ಎಷ್ಟು ಬೇಸತ್ತಿದ್ದಾರೆ ಎನ್ನುವುದು ಊಹೆಗೂ ಮೀರಿದ್ದಾಗಿದೆ.