Mysore
33
overcast clouds

Social Media

ಬುಧವಾರ, 08 ಏಪ್ರಿಲ 2026
Light
Dark

ಹುಣಸೂರು | ಜಮೀನು ಗಲಾಟೆ ; ಮಹಿಳೆ ಆತ್ಮಹತ್ಯೆಗೆ ಯತ್ನ

ಹುಣಸೂರು : ತಾಲೂಕಿನ ಗಟಹಳ್ಳಿಯ ಕುಟುಂಬದ ಸಂಬಂಧಿಕರ ನಡುವೆ ಜಮೀನು ವಿವಾದ ವಿಚಾರವಾಗಿ ಗಲಾಟೆ ನಡೆದು ಕ್ರಿಮಿನಾಶಕ ಸೇವಿಸಿ ರೈತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಶಿಲ್ಪಾ (26) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಮೈಸೂರಿನ ಕೆ.ಆರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿಲ್ಪಾ ಅವರ ಸ್ಥಿತಿ ಗಂಭೀರವಾಗಿದೆ.

ಶಿಲ್ಪಾ ಪತಿ ಕೆಂಗಣ್ಣ ಅವರ ತಾಯಿ ನಾಗಮ್ಮ ಹೆಸರಲ್ಲಿ 1 ಎಕರೆ ಜಮೀನು ಇದೆ. ಕೆಂಗಣ್ಣನಿಗೆ ಓರ್ವ ಸಹೋದರ ಹಾಗೂ ಸಹೋದರಿ ಇದ್ದಾರೆ. ಜಮೀನು ವಿಚಾರವಾಗಿ ಇವರೆಲ್ಲರ ನಡುವೆ ಭಿನ್ನಭಿಪ್ರಾಯ ಉಂಟಾಗಿದೆ.

ಕೆಂಗಣ್ಣ ಸಹೋದರಿ ಸುಮ ತಾಯಿಯಿಂದ ಜಮೀನು ಬರೆಯಿಸಿಕೊಂಡಿದ್ದಾರೆ ಎಂದು ಆರೋಪಿಸಿ ಕೇಳಲು ಹೋಗಿದ್ದಾರೆ. ಈ ವೇಳೆ ಸುಮ, ಗವಿರಾಜು, ಮಲ್ಲ ಹಾಗೂ ಚಂದ್ರು ಪತ್ನಿ ಶಿಲ್ಪಾ ಮೇಲೆ ಮುಗಿಬಿದ್ದು ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಇದರಿಂದ ಮನನೊಂದ ಶಿಲ್ಪಾ ಕ್ರಿಮಿನಾಶಕ ಸೇವಿಸಿದ್ದಾರೆ.

ಆಸ್ಪತ್ರೆಯಲ್ಲಿ ದಾಖಲಾಗಿರುವ ಶಿಲ್ಪಾ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ನನ್ನ ಪರಿಸ್ಥಿತಿಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!