Mysore
17
overcast clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ಹುಣಸೂರು | ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ

ಹನಗೋಡು: ವರದಕ್ಷಿಣೆ ದಾಹಕ್ಕೆ ಗೃಹಿಣಿಯೊಬ್ಬರು ಬಲಿಯಾಗಿರುವ ಘಟನೆ ಹನಗೋಡು ಬಳಿಯ ಸಿಂಡೇನಹಳ್ಳಿಯಲ್ಲಿ ನಡೆದಿದ್ದು, ಆರೋಪಿ ಪತಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಸಿಂಡೇನಹಳ್ಳಿ ಗ್ರಾಮದ ಶ್ರೀನಿವಾಸರ ಪತ್ನಿ ರೇಷ್ಮಾ(೨೫)ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.

ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆರೋಪಿ ಪತಿ ಶ್ರೀನಿವಾಸನನ್ನು ಬಂಧಿಸಲಾಗಿದೆ. ೬ ವರ್ಷಗಳ ಹಿಂದೆ ಹನಗೋಡಿಗೆ ಸಮೀಪದ ಈರತಯ್ಯನಕೊಪ್ಪಲಿನ ಚಂದ್ರೇಗೌಡರ ಪುತ್ರಿ ರೇಷ್ಮಾರನ್ನು ಶ್ರೀನಿವಾಸನಿಗೆ ವಿವಾಹ ಮಾಡಿಕೊಡಲಾಗಿತ್ತು. ಇತ್ತೀಚೆಗೆ ಗಂಡ-ಹೆಂಡತಿ ನಡುವೆ ವಿರಸ ಉಂಟಾಗಿ ಹಿರಿಯರು ಅನೇಕ ಬಾರಿ ನ್ಯಾಯ ಪಂಚಾಯಿತಿ ಮಾಡಿ ತಿಳಿಹೇಳಿ ಕಳುಹಿಸಿದ್ದರು. ಆದರೂ ಆಗಾಗ್ಗೆ ವರದಕ್ಷಿಣೆ ತರುವಂತೆ ಪತಿ ಶ್ರೀನಿವಾಸ್ ಪೀಡಿಸುತ್ತಾ ಗಲಾಟೆ ಮಾಡುತ್ತಿದ್ದರಿಂದ ಬೇಸತ್ತ ಮಗಳು ಗಂಡನ ಮನೆಯಲ್ಲೇ ಮಾ.೧೧ರ ಮಂಗಳವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಗಳ ಸಾವಿಗೆ ಪತಿ ಶ್ರೀನಿವಾಸ, ಈತನ ಸಹೋದರ ಶ್ರೀಧರ್, ತಂದೆ-ತಾಯಿ ಮಾದೇಗೌಡ-ಸರಸಮ್ಮ ನವರೇ ಕಾರಣ ಎಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರೇಷ್ಮಾರ ತಾಯಿ ಶಾಂತಮ್ಮ ದೂರು ದಾಖಲಿಸಿದ್ದಾರೆ.

ಇನ್ಸ್‌ಪೆಕ್ಟರ್ ಮುನಿಸ್ವಾಮಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಶ್ರೀನಿವಾಸನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಉಳಿದ ಆರೋಪಿಗಳು ನಾಪತ್ತೆಯಾಗಿದ್ದಾರೆ.

ತಹಸಿಲ್ದಾರ್ ಎಂ.ಮಂಜುನಾಥ್ ಭೇಟಿ ನೀಡಿ ವಿಚಾರಣೆ ನಡೆಸಿದ ನಂತರ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ.

 

Tags:
error: Content is protected !!