Mysore
31
few clouds

Social Media

ಶನಿವಾರ, 28 ಮಾರ್ಚ್ 2026
Light
Dark

ಹುಣಸೂರು: ತಡೆಗೋಡೆ ಕಂಬದ ನಡುವೆ ಸಿಲುಕಿದ್ದ ಕಾಡಾನೆ ರಕ್ಷಣೆ

ಹುಣಸೂರು: ತಡೆಗೋಡೆ ಕಂಬದಲ್ಲಿ ಸಿಲುಕಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ಬೆಳಿಗ್ಗೆ ರಕ್ಷಣೆ ಮಾಡಿದ್ದಾರೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನ ಹೊಸಹಳ್ಳಿ ಸಮೀಪದ ಅರಣ್ಯ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಕಂಬಿ ನಡುವೆ ಆನೆ ಸಿಲುಕಿ ಗಂಟೆಗಟ್ಟಲೆ ನರಳಾಡುತ್ತಿತ್ತು.

ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಮೂಲಕ ಕಂಬಿಯ ಗೋಡೆಯನ್ನು ಒಡೆದು ಕಾಡಾನೆಯನ್ನು ರಕ್ಷಿಸಿದ್ದಾರೆ. ನಂತರ ಆನೆ ಕಾಡಿಗೆ ಮರಳಿದೆ.

Tags:
error: Content is protected !!