Mysore
25
broken clouds

Social Media

ಮಂಗಳವಾರ, 31 ಮಾರ್ಚ್ 2026
Light
Dark

ಹುಲ್ಲಹಳ್ಳಿ | ಚಿರತೆ ದಾಳಿಗೆ ಎರಡು ಮೇಕೆ ಬಲಿ

ಹುಲ್ಲಹಳ್ಳಿ : ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಭಾಗದ ಮೊತ್ತ ಗ್ರಾಮದಲ್ಲಿ ಭಾನುವಾರ ಸಂಜೆ ಚಿರತೆ ದಾಳಿ ಮಾಡಿ ಎರಡು ಮೇಕೆಯನ್ನು ಕೊಂದು ಹಾಕಿದೆ.

ಮೊತ್ತ ಗ್ರಾಮದ ಮಲಿಯಯ್ಯ ಮತ್ತು ಬೀಳಿಗೌಡ ಎಂಬುವವರು ಮೇಕೆಯನ್ನು ಮೇಯಿಸಲು ಎಂದಿನಂತೆ ಜಮೀನಿಗೆ ಹೋಗಿದ್ದರು. ಈ ವೇಳೆ ಏಕಾಏಕಿ ದಾಳಿ ಮಾಡಿರುವ ಚಿರತೆ ಮಲಿಯಯ್ಯ ಹಾಗೂ ಬೀಳಿಗೌಡ ಎಂಬ ಇಬ್ಬರಿಗೆ ಸೇರಿದ ಒಂದೊಂದು ಮೇಕೆ ಮರಿಯ ಮೇಲೆ ದಾಳಿ ನಡೆಸಿ, ಎರಡು ಮೇಕೆಯನ್ನು ಕೊಂದು, ಇನ್ನೆರಡು ಮೇಕೆಗೆ ಗಾಯಮಾಡಿ ಪರಾರಿಯಾಗಿದೆ.

ಕಳೆದ ಹಲವು ತಿಂಗಳಿಂದ ಗ್ರಾಮದಲ್ಲಿ ಚಿರತೆ ದಾಳಿಗೆ ಹತ್ತಾರು ಸಾಕು ಪ್ರಾಣಿಗಳು ಬಲಿಯಾಗಿದೆ. ಹಲವೆಡೆ ಗ್ರಾಮಸ್ಥರು ಭಯದ ವಾತಾವರಣದಲ್ಲಿ ತಿರುಗಾಡುವಂತಾಗಿದೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಸೆರೆಗೆ ಮುಂದಾಗಬೇಕು ಎಂದು ರೈತ ಮಲಿಯಯ್ಯ ಆಗ್ರಹಿಸಿದ್ದಾರೆ.

Tags:
error: Content is protected !!