Mysore
20
broken clouds

Social Media

ಶುಕ್ರವಾರ, 13 ಮಾರ್ಚ್ 2026
Light
Dark

ಕೈ ಸಾಲವಾಗಿ 25 ಕೋಟಿ ನೀಡುವ ಆಮಿಷ : ಹುಬ್ಬಳ್ಳಿಯ ವ್ಯಕ್ತಿಗೆ ಮೈಸೂರಿನ ಐವರಿಂದ ಲಕ್ಷಾಂತರ ರೂ. ವಂಚನೆ

ಮೈಸೂರು : ಹುಬ್ಬಳ್ಳಿಯ ಹರ್ಷ ಎಂಬುವವರಿಗೆ ಕೈ ಸಾಲವಾಗಿ 25 ಕೋಟಿ ರೂ. ನೀಡುತ್ತೇವೆ ಎಂದು ಆಮಿಷವೊಡ್ಡಿ ಮೈಸೂರು ಮೂಲದ ಐವರು ಖದೀಮರು ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಹುಬ್ಬಳ್ಳಿ ನಿವಾಸಿ ಹರ್ಷ ಎಂಬವರೇ ವಂಚನೆಗೆ ಒಳಗಾದವರು. ಈ ಸಂಬಂಧ ಅವರು ಮೈಸೂರು ತಾಲ್ಲೂಕಿನ ಕೊಪ್ಪಲೂರು ಬಳಿಯ ಲೇಕ್ ವ್ಯೂ ಬಡಾವಣೆಯ ನಿವಾಸಿ ನಾರಾಯಣಶೆಟ್ಟಿ , ಕಾರ್ತಿಕ್, ಯಶವಂತಶೆಟ್ಟಿ, ಪ್ರವೀಣ್, ದೀಪಕ್ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ.

ಘಟನೆಯ ವಿವರ:
ಧಾರವಾಡದ ಹೋಟೆಲ್‌ವೊಂದರಲ್ಲಿ ಹರ್ಷ ಅವರಿಗೆ ಯಶವಂತಶೆಟ್ಟಿ ಹಾಗೂ ಪ್ರವೀಣ್ ಎಂಬವರು, ನಾವು ಕಡಿಮೆ ಬಡ್ಡಿ ದರದಲ್ಲಿ ಕೈ ಸಾಲ ಕೊಡಿಸುವವರು ಎಂದು ಪರಿಚಯಿಸಿಕೊಂಡಿದ್ದಾರೆ. ನಂತರ ನೀವು ಮೈಸೂರಿಗೆ ಬಂದರೆ, ಹಣಕಾಸಿನ ವಿಚಾರ ಮಾತನಾಡಬಹುದು ಎಂದು ಹೇಳಿದ್ದಾರೆ. ಅವರ ಮಾತನ್ನು ನಂಬಿದ ಹರ್ಷ ಅವರು ಮೈಸೂರಿನ ಖಾಸಗಿ ಹೋಟೆಲ್‌ವೊಂದಕ್ಕೆ ಬಂದು ಉಳಿದುಕೊಂಡಿದ್ದಾರೆ. ನಂತರ 25 ಕೋಟಿ ರೂ. ಹಣವನ್ನು ಸಾಲವಾಗಿ ನೀಡಲು ಒಪ್ಪಿದ್ದಾರೆ. ಈ ಸಂಬಂಧ ಪತ್ರ ಮಾಡಿಸಬೇಕು ಎಂದು ಹೇಳಿ ಒಂದು ಕೋಟಿ ರೂ.ಗೆ, ಒಂದು ಲಕ್ಷ ರೂ. ಛಾಪಾ ಕಾಗದ ಖರೀದಿಸಬೇಕು ಎಂದು ಹೇಳಿದ್ದಾರೆ.

ಅವರ ಮಾತನ್ನು ನಂಬಿದ ಹರ್ಷ,25 ಕೋಟಿ ರೂ. ಸಾಲ ಪಡೆಯಬಹುದು ಎಂಬ ಆಸೆಯಿಂದ 25 ಲಕ್ಷ ರೂ. ನೀಡಿದ್ದಾರೆ. ನಂತರ ಆರೋಪಿಗಳು ತಾವು ಕೊಡಬೇಕಾದ ಹಣವನ್ನು ನಿಮ್ಮ ಮನೆಗೆ ತಲುಪಿಸುತ್ತೇವೆ ಎಂದು ಹೇಳಿ ಹರ್ಷ ಅವರನ್ನು ವಾಪಸ್ ಕಳುಹಿಸಿದ್ದಾರೆ. ಆದರೆ, ಸುಮಾರು ಒಂದು ತಿಂಗಳಾದರೂ ಹಣ ಮಾತ್ರ ಹರ್ಷ ಅವರ ಕೈ ಸೇರಲಿಲ್ಲ. ಹೀಗಾಗಿ ಅವರು ಮೈಸೂರಿಗೆ ಬಂದು ನಾರಾಯಣಶೆಟ್ಟಿ ಅವರ ಮನೆಗೆ ತೆರಳಿದ್ದಾರೆ. ಆದರೆ, ಆರೋಪಿಗಳೆಲ್ಲರೂ ಮನೆಯನ್ನು ಖಾಲಿ ಮಾಡಿದ್ದರು. ಅದರಿಂದ ಹರ್ಷ ಅವರಿಗೆ ತಾವು ಮೋಸ ಹೋಗಿರುವುದು ಅರ್ಥವಾಯಿತು. ಅವರು ಕೂಡಲೇ ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

 

 

Tags:
error: Content is protected !!