Mysore
22
broken clouds
Light
Dark

ಗೃಹರಕ್ಷಕರು ತರಬೇತಿ ಪಡೆದ ನಂತರ ನಾಗರೀಕರ ಸಂಕಷ್ಟಗಳಿಗೆ ಸ್ಪಂದಿಸಬೇಕು : ಸಿ.ಶಿವರಾಜು

ಮೈಸೂರು : ಗೃಹರಕ್ಷಕದಳ ಸ್ವಯಂಸೇವಾ ಸಂಸ್ಥೆ ಯಾಗಿದ್ದು ಹೊಸದಾಗಿ ನೊಂದಾವಣೆಯಾಗಿರುವ ಗೃಹರಕ್ಷಕರು ತರಬೇತಿ ಪಡೆದ ನಂತರ ನಾಗರೀಕರ ಸಂಕಷ್ಟಗಳಿಗೆ ಸ್ಪಂದಿಸಬೇಕೆಂದು ಅಪರ ಜಿಲ್ಲಾಧಿಕಾಕಾರಿ ಸಿ.ಶಿವರಾಜು ಸೂಚಿಸಿದರು.

ಜ್ಯೋತಿ ನಗರದ ಡಿಎಆರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಗೃಹರಕ್ಷಕರ ಮೂಲ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸರಿಗೆ ಸರಿ ಸಮಾನರಾಗಿ ಸ್ವಯಂ ಸೇವಕ ಗೃಹರಕ್ಷಕರು ಎಲ್ಲೆಡೆ ಕೆಲಸ ಮಾಡುತ್ತಿದ್ದು.ಇತ್ತೀಚಿನ ದಿನಗಳಲ್ಲಿ ಪೊಲೀಸ್ ಕೊರತೆಯನ್ನು ನೀಗಿಸುತ್ತಿದೆ ಅಲ್ಲದೆ ರಾಜ್ಯದಲ್ಲಿನ ಎಲ್ಲ ಇಲಾಖೆಗಳಲ್ಲೂ ಗೃಹರಕ್ಷಕರಿಗೆ ಬೇಡಿಕೆ ಇದೆ ಎಂದರು.

ಹಲವು ಕಚೇರಿಗಳಲ್ಲಿ, ಜಾತ್ರೆ, ಸಂಚಾರ ನಿಯಂತ್ರಣ, ರೈಲ್ವೆ,  ಕಾನೂನು ಸುವ್ಯವಸ್ಥೆ ಕರ್ತವ್ಯಗಳಿಗೂ ನಿಯೋಜಿಸಲಾಗುತ್ತಿದೆ ಎಂದರು.

ತರಬೇತಿ ವೇಳೆಯಲ್ಲಿ ಕಲಿತತದ್ದನ್ನು ಸಬ್ದಳಕೆ ಮಾಡಿಕೊಂಡು ತೊಂದರೆಗೊಳಗಾದ ಸಾರ್ವಜನಿಕರಿಗೆ ನೆರವಾಗಬೇಕು.
ಜೊತೆಗೆ ನಿಮ್ಮ ಆರೋಗ್ಯದ ಕಡೆಗೂ ಗಮನ ಕೊಡುವುದು ಸಹ ಅವಶ್ಯವೆಂಬುದನ್ನರಿತು ಕೆಲಸಗಳ್ಲಿ ತೊಡಗಿಸಿಕೊಳ್ಳಿ ಎಂದು ಸಲಹ ನೀಡಿದರು.

ಜಿಲ್ಲಾ ಸಮಾದೇಷ್ಟರಾದ (ಕಮಾಂಡೆಂಟ್) ಡಾ. ಎಂ. ಕಾಂತರಾಜು ಮಾತನಾಡಿ ಇಲಾಖೆಯ ಉದ್ದೇಶ ಮತ್ತು ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿ. ಪ್ರಶಿಕ್ಷಣಾರ್ಥಿಗಳಿಗೆ 10 ದಿನಗಳ ಕಾಲ ತರಬೇತಿ ನೀಡಲಾಗುತ್ತಿದೆ.

ಇಲ್ಲಿ ಮೂಲ ತರಬೆತಿ ಪಡೆದುಕೊಂಡ ನಂತರ ಇಲಾಖೆ ನೀಡುವ ಸಮವಸ್ತ್ರ ಉಚಿತವಾಗಿ ವಿತರಿಸಲಾಗುತ್ತದೆ.ಇದರೊಟ್ಟಿಗೆ ಆದ್ಯತೆ ಮೇಲೆ ವಿವಿಧ ಇಲಾಖೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ.

ಈವೇಳೆ ಇಲಾಖೆ ನಿಗದಿ ಪಡಿಸುವ ಭತ್ಯೆ ನೀಡಲಾಗುವುದು.ಅಲ್ಲದೆ ನಿಮ್ಮ ತಾಲೂಕುಗಳ್ಲಿ ನಡೆಯುವ ವಾರದ ಕವಾಯತುಗಳಿಗೆ ಹಾಜರಾಗುವುದು ಕಡ್ಡಾಯವಾಗಿದ್ದು.

ಕವಾಯತಿಗೆ ಹಾಜರಾಗುವ ವೇಳೆ ಪ್ರತಿ ಗೃಹರಕ್ಷಕರಿಗೆ ತಲಾ ೧೦೦ ರೂ ಅವರವರ ಖಾತೆಗೆ ನೇರವಾಗಿ ಜಮೆಯಾಗಲಿದೆ. ಆದ್ಯತೆ ಮೇರೆಗೆ ಕರ್ತವ್ಗಳಿಗೆ ನಿಯೋಜಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಎಂ.ಎನ್ ವಿಶ್ವನಾಥ್ ,ಬೋಧಕರಾದ ಚಂದನ್, ಸಹಾಯಕ ಬೋಧಕ ಮಂಜುನಾಥ್, ಕ್ಯಾಂಪ್ ಕಮಾಂಡೆಂಟ್ ಸಂಪತ್ ಕುಮಾರ್, ಘಟಕಾಧಿಕಾರಿ ರೇವಣ್ಣ, ವಿದ್ಯಾ ಇದ್ದರು.