Mysore
27
few clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಹುಣ್ಣಿಮೆ ದಿನದಂದು ಕವಿಗೋಷ್ಟಿ ನಡೆಸಿ : ಹೆಚ್.ಪಿ ಮಂಜುನಾಥ್‌ ಸಲಹೆ

ಹುಣಸೂರು : ರಾಜ್ಯದ ಎರಡನೇ ದೊಡ್ಡ ಆಲದ ಮರವನ್ನು ಸಂರಕ್ಷಿಸಿ, ಆಮೂಲಕ ಜಾನಪದ ಜಾತ್ರೆ ಆಯೋಜಿಸಿರುವ ಗ್ರಾಮಸ್ಥರು ಇನ್ಮುಂದೆ ಈ ಸ್ಥಳದಲ್ಲಿ ಹುಣ್ಣಿಮೆ ಬೆಳದಿಂಗಳಲ್ಲಿ ಕವಿಗೋಷ್ಠಿ ನಡೆಸಿ ಎಂದು ಮಾಜಿ ಶಾಸಕ ಹೆಚ್.ಪಿ ಮಂಜುನಾಥ್‌ ಸಲಹೆ ನೀಡಿದರು.

ತಾಲೂಕಿನ ಕುಡಿನೀರು ಮುದ್ದನಹಳ್ಳಿಯಲ್ಲಿರುವ ಇತಿಹಾಸ ಪ್ರಸಿದ್ದ ರಾಜ್ಯದ ಎರಡನೇ ದೊಡ್ಡ ಆಲದ ಮರದ ಪ್ರಪ್ರಥಮ ಜಾನಪದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೊಡ್ಡ ಆಲದ ಮರದ ಸಂರಕ್ಷಣೆ ಆಶಯ ಒಳ್ಳೆಯದೆ, ಇದರ ಅಭಿವೃದ್ದಿಗೆ ಸಹಕಾರ ನೀಡುವೆ. ಈ ಐತಿಹಾಸಿಕ ಮರದ ಬಗ್ಗೆ ಹೆಚ್ಚು ಪ್ರಚುರಪಡಿಸಬೇಕು. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಹುಣ್ಣಿಮೆಯ ಬೆಳದಿಂಗಳಿನಲ್ಲಿ ವಿದ್ವಾಂಸರು, ಇತಿಹಾಸಕಾರರನ್ನು ಕರೆಸಿ ಕವಿಗೋಷ್ಟಿ ನಡೆಸಿ, ಪ್ರಕೃತಿ ಸಂಬಂಧಿತ ಕಾರ್ಯಕ್ರಮ ಆಯೋಜಿಸಿ. ಈ ಕಾರ್ಯಕ್ರಮಕ್ಕೆ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಪ್ರಕಟಿಸಿದರು.

Tags:
error: Content is protected !!