Mysore
25
scattered clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಮೈಸೂರಲ್ಲಿ ಸುರಿದ ಭರ್ಜರಿ ಮಳೆ: ರಸ್ತೆಗಳು ಜಲಾವೃತ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸೋಮವಾರ ಸಂಜೆ ಭರ್ಜರಿ ಮಳೆಯಾಗಿದ್ದು, ರಸ್ತೆಯಲ್ಲಾ ಜಲಾವೃತಗೊಂಡಿದ್ದವು.

ಸರಸ್ವತಿಪುರಂ, ಕುವೆಂಪುನಗರ, ಭೋಗಾದಿ, ಗಂಗೋತ್ರಿ ಲೇಔಟ್‌, ರಾಮಸ್ವಾಮಿ ವೃತ್ತ, ಅಗ್ರಹಾರ, ಕೆ.ಆರ್‌ ಸರ್ಕಲ್‌ ಸೇರಿದಂತೆ ಹಲವೆಡೆ ಜೋರು ಮಳೆ ಸುರಿಯಿತು

ಸಂಜೆ ಸುಮಾರು 5 ಗಂಟೆಗೆ ಶುರುವಾದ ಮಳೆಯು ಅರ್ಧಗಂಟೆಗೂ ಹೆಚ್ಚು ಸುರಿಯಿತು, ಪರಿಣಾಮ ರಸ್ತೆಯಲ್ಲಾ ಜಲಾವೃತವಾಗಿದ್ದವು. ಇದೇ ವೇಳೆಗೆ ಶಾಲೆ, ಕಾಲೇಜು ಮುಗಿಸಿ ಮನೆಗೆ ತೆರಳಲು ಸಿದ್ಧವಾಗಿದ್ದ ವಿದ್ಯಾರ್ಥಿಗಳು ಪರದಾಡುವಂತಾಯಿತು. ಜೊತೆಗೆ ವಾಹನ ಸವಾರರು ಪರದಾಡುವಂತಾಯಿತು.

Tags:
error: Content is protected !!